ಕರ್ನಾಟಕಪ್ರಮುಖ ಸುದ್ದಿ

ಎಸ್.ಎಂ.ಕೃಷ್ಣ-ಬಿಎಸ್‍ವೈ ಭೇಟಿ: ಸುಮಲತಾಗೆ ಬೆಂಬಲ ಕೊಡುವ ಕುರಿತು ಚರ್ಚೆ

ಬೆಂಗಳೂರು (ಮಾ.16): ಮಂಡ್ಯ ರಾಜಕೀಯ ರಭಸ ದಿನೇ-ದಿನೇ ಹೆಚ್ಚಾಗುತ್ತಿದೆ. ಇಂದು ಮಂಡ್ಯ ರಾಜಕೀಯ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಬೆಂಗಳೂರು ನಿವಾಸದಲ್ಲಿ ಯಡಿಯೂರಪ್ಪ ಅವರು ಭೇಟಿ ಆದರು. ನಿನ್ನೆಯಷ್ಟೆ ಸುಮಲತಾ ಅವರು ಕೃಷ್ಣ ಅವರನ್ನು ಭೇಟಿಯಾಗಿ ಬೆಂಬಲ ಕೇಳಿದ್ದರು. ಬಿಜೆಪಿ ಮುಖಂಡರೂ ಆಗಿರುವ ಕೃಷ್ಣ ಅವರು ಬೆಂಬಲದ ಬಗ್ಗೆ ಬಿಜೆಪಿ ಮುಖಂಡರ ಬಳಿ ಮಾತನಾಡುವುದಾಗಿ ಹೇಳಿದ್ದರು.

ಅದರಂತೆ ಇಂದು ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣ ಅವರನ್ನು ಯಡಿಯೂರಪ್ಪ ಅವರು ಭೇಟಿಯಾಗಿದ್ದು, ಸುಮಲತಾ ಅವರಿಗೆ ಮಂಡ್ಯದಲ್ಲಿ ಬೆಂಬಲ ನೀಡುವ ಬಗ್ಗೆ ಮಾತುಕತೆ ಆಡಿದ್ದಾರೆ. ಮಂಡ್ಯ ರಾಜಕಾರಣದ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದು, ಸುಮಲತಾ ಅವರ ವಿಷಯವೇ ಚರ್ಚೆಯ ಪ್ರಧಾನ ಅಂಶವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ.

ಸುಮಲತಾ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡು ಅವರಿಗೆ ಟಿಕೆಟ್ ನೀಡುತ್ತಾರೆಯೇ ಅಥವಾ ಪಕ್ಷೇತರವಾಗಿ ನಿಂತರೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಹಾಕದೆ ಅವರಿಗೆ ಬೆಂಬಲ ನೀಡುತ್ತಾರೆಯೇ ನೋಡಬೇಕಿದೆ. ಮೂಲಗಳ ಪ್ರಕಾರ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಲಿದೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: