ಮೈಸೂರು

ಲೋಕಸಭಾ ಚುನಾವಣೆ ಹಿನ್ನೆಲೆ : ರೌಡಿಶೀಟರ್ ಗಳಿಗೆ ಪೊಲೀಸರಿಂದ ಫುಲ್ ಕ್ಲಾಸ್ ; ರೌಡಿ ಶೀಟರ್ ಗಳ ಮನೆ ಮೇಲೆ ದಿಢೀರ್ ದಾಳಿ

ಮೈಸೂರು,ಮಾ.17:- ಮೈಸೂರು ನಗರ ಪೊಲೀಸರಿಂದು  ರೌಡಿಶೀಟರ್ ಗಳಿಗೆ ಸಿಎಆರ್ ಮೈದಾನದಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡರು.

ಲೋಕಸಭೆ ಚುನಾವಣೆ 2019ರ ಸಂಬಂಧ ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣಾ ಅಕ್ರಮ ತಡೆಯುವ ಸಂಬಂಧ ನಗರ ಪೊಲೀಸ್ ಆಯುಕ್ತರಾದ   ಕೆ.ಟಿ ಬಾಲಕೃಷ್ಣ  ಆದೇಶದಂತೆ ಡಿ.ಸಿ.ಪಿ  ಮುತ್ತುರಾಜು ಎಂ. ಅವರ ನೇತೃತ್ವದಲ್ಲಿ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬ೦ದಿಗಳು ಆಪರೇಷನ್  ಸನ್ ರೈಸ್ ಹೆಸರಿನಲ್ಲಿ   ಸುಮಾರು 50 ರೌಡಿ  ಆಸಾಮಿಗಳ ಮನೆಗಳ ಮೇಲೆ ದಿಡೀರ್ ದಾಳಿ  ನಡೆಸಿ  ಪರಿಶೀಲನೆ  ನಡೆಸಿದರು. ಡಿ.ಸಿ.ಪಿ.   ಮುತ್ತುರಾಜು ಎಂ.   ರೌಡಿ ಆಸಾಮಿಗಳ ಪರೇಡ್ ನಡೆಸಿದರು. ಮೈಸೂರು ನಗರ ವ್ಯಾಪ್ತಿಯ   86  ರೌಡಿಶೀಟರ್ ಗಳಿಗೆ ಪರೇಡ್ ನಡೆಸಿ ಕ್ಲಾಸ್ ತೆಗೆದುಕೊಂಡರು.  ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಚ್ಚರಿಕೆಯಿಂದ ಇರಬೇಕೆಂದು ರೌಡಿಗಳಿಗೆ ಪೊಲೀಸರು  ಆದೇಶ ನೀಡಿದರು. ನಿರ್ಭಯವಾಗಿ ಮತ ಚಲಾಯಿಸಬೇಕಿದೆ. ಇದಕ್ಕಾಗಿ ಭೀತಿ ಹುಟ್ಟಿಸಬಾರದು. ದುರ್ಬಲರ ಮೇಲೆ ಒತ್ತಡ ಹೇರಬಾರದು . ರಾಜಕೀಯವಾಗಿ ಬಳಸಿಕೊಳ್ಳಲು ಅವಕಾಶ ಕೊಡಬಾರದು. ನಿಮ್ಮ ಮತ ನೀವು ಚಲಾಯಿಸಿ ಆದರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ನಡವಳಿಕೆ ಬಗ್ಗೆ ಎಚ್ಚರವಿರಲಿ. ಜನಗಳು ಹೆದರದಂತೆ ವೇಷ ಭೂಷಣಗಳಲ್ಲಿ ಬದಲಾವಣೆ ಆಗಬೇಕು. ಜನಗಳಿಗೆ ಬೆದರಿಸಬಾರದು. ನಿಮ್ಮ ಮೇಲೆ ಹದ್ದಿನ ಕಣ್ಣಿದೆ  ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಖಡಕ್ ಎಚ್ಚರಿಕೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: