ಮೈಸೂರು

ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ; ಬೈಕ್ ರ್ಯಾಲಿ

ಮೈಸೂರು, ಮಾ.17:-ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವತಿಯಿಂದ ಬೈಕ್  ರ್ಯಾಲಿಯನ್ನು  ಜಿಲ್ಲಾಡಳಿತ, ಸ್ವೀಪ್ ಕಮಿಟಿ ಸಹಭಾಗಿತ್ವದಲ್ಲಿ  ಇಂದು ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.

ಪುರಭವನ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್  ಹಸಿರು ನಿಶಾನೆ ತೋರಿದರು. ನೂರಾರು ಮಹಿಳಾ ಬೈಕರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  ಪುರಭವನ, ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್ ವೃತ್ತ, ಹಾರ್ಡಿಂಗ್ ವೃತ್ತದ ಮೂಲಕ ರ್ಯಾಲಿ ಸ್ವಸ್ಥಾನ ತಲುಪಿತು.  ಮಹಿಳಾ ಸಮಾನತೆ ಬಗ್ಗೆಯೂ ಅರಿವು ಮೂಡಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: