ಪ್ರಮುಖ ಸುದ್ದಿ

ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಬಿಯರ್ ಬಾಟಲಿಯಲ್ಲಿ ಕಿತ್ತಾಡಿಕೊಂಡ ಹಾಲಿ-ಮಾಜಿ ಪ್ರಿಯತಮರು

ರಾಜ್ಯ(ಬೆಂಗಳೂರು)ಮಾ.17:-  ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಮಾಜಿ ಪ್ರಿಯತಮ ಉದ್ಯಮಿ ಹಾಗೂ ಹಾಲಿ ಪ್ರಿಯತಮ ಆರ್ ಟಿ ಒ ಅಧಿಕಾರಿಗಳಿಬ್ಬರು ಬೀಯರ್ ಬಾಟಲ್ ನಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ರೆಸಿಡೆನ್ಸಿ ರಸ್ತೆಯ ಹೊಟೇಲ್‌ವೊಂದರಲ್ಲಿ ನಟಿ ರಾಗಿಣಿ ಜತೆ ಆರ್ ಟಿ ಒ ಅಧಿಕಾರಿ ರವಿಶಂಕರ್ ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ರಾಗಿಣಿ ಮಾಜಿ ಬಾಯ್ ಫ್ರೆಂಡ್ ಶಿವಪ್ರಕಾಶ್, ಗಲಾಟೆ ಆರಂಭಿಸಿದ್ದಾರೆ. ಬಳಿಕ ಇಬ್ಬರ ನಡುವೆ ವಾಗ್ವಾದ ವಿಪರೀತಕ್ಕೆ ಹೋಗಿ ಇಬ್ಬರೂ ಬೀಯರ್ ಬಾಟಲ್ ಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಕುರಿತು ಕುರಿತು ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮೇಲೆ ನಡೆದ ಹಲ್ಲೆ ಕುರಿತಾಗಿ ದೂರು ನೀಡಿರುವ ಅಧಿಕಾರಿ ರವಿಶಂಕರ್, ಮಾ.15ರಂದು ಶುಕ್ರವಾರ  ರಾತ್ರಿ 11 ಗಂಟೆ ಸುಮಾರಿಗೆ ನಟಿ ರಾಗಿಣಿ ಮತ್ತು ಇತರ ಸ್ನೇಹಿತರ ಜೊತೆ ಹೊಟೇಲ್‌ಗೆ ತೆರಳಿದ್ದೆ.  ರಾತ್ರಿ 11.45ರ ಸುಮಾರಿಗೆ ಊಟ ಮಾಡುತ್ತಿದ್ದಾಗ ಶಿವಪ್ರಕಾಶ್‌ ಎಂಬಾತ ನಾವು ಇದ್ದಲ್ಲಿಗೆ ಬಂದು ಜಗಳ ತೆಗೆದ. ನೀನು ಈಕೆಯ ಜತೆಗೆ ಬರಬಾರದು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾನೆ. ಅಲ್ಲದೇ ಖಾಲಿ ಬಿಯರ್‌ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಬೇರೆಕಡೆ ಸಿಗು ಆಗ ನಿನ್ನನ್ನು ಹತ್ಯೆ ಮಾಡುತ್ತೇ ಎಂದು ಬೆದರಿಕೆ ಹಾಕಿದ್ದಾನೆ. ಆರೋಪಿ ಶಿವಪ್ರಕಾಶ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ರವಿಶಂಕರ್‌ ತಿಳಿಸಿದ್ದಾರೆ.

ಗಣಿ ಉದ್ಯಮಿ, ನಿರ್ಮಾಪಕರಾಗಿರುವ ಶಿವಪ್ರಕಾಶ್ ಹಾಗೂ ರಾಗಿಣಿ ಈ ಹಿಂದೆ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಶಿವಪ್ರಕಾಶ್ ರಾಗಿಣೆಗೆ ಎರಡು ಕಾರ್ ಗಿಫ್ಟ್ ನೀಡಿದ್ದರು. ಈಗ ಗಲಾಟೆ ಬಳಿಕ ಒಂದು ಕಾರನ್ನು ಕಿತ್ತುಕೊಂಡುಹೋಗಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: