ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್‌ಗೆ ಜೆಡಿಎಸ್‌ ಕೈ ಕೊಡುವ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರ : ಮದುವೆಯಾದ ಹೊಸದರಲ್ಲಿ ಗಂಡು ಹೆಣ್ಣಿನ ನಡುವೆ ಭಿನ್ನಾಭಿಪ್ರಾಯ ಬರುತ್ತೆ ವಿಜಯ್ ಶಂಕರ್ ಟಾಂಗ್

ಮೈಸೂರು,ಮಾ.17:-  ಕಾಂಗ್ರೆಸ್‌ಗೆ ಜೆಡಿಎಸ್‌ ಕೈ ಕೊಡುವ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸಿ.ಹೆಚ್.ವಿಜಯ್‌ ಶಂಕರ್  ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮದುವೆಯಾದ ಹೊಸದರಲ್ಲಿ ಗಂಡು ಹೆಣ್ಣಿನ ನಡುವೆ  ಶಾಸ್ತ್ರ ಸಂಪ್ರದಾಯದಲ್ಲಿ ಭಿನ್ನಾಭಿಪ್ರಾಯ ಬರುತ್ತೆ. ಹಾಗಂತ ಅವರು ಸಂಸಾರ ಮಾಡೋದು ಬಿಡೋಕೆ ಆಗುತ್ತಾ?. ಇದು ಸಹ ಹಾಗೆಯೇ ಎಂದು ಸಾ.ರಾ.ಮಹೇಶ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಅವರು ಎಲ್ಲಿ ಅಭ್ಯರ್ಥಿ ಆರ್ಗಿರ್ತಾರೋ ನಮ್ಮವರ ಸಹಕಾರ ಬೇಕು. ಹಾಗೇಯೆ ನಮ್ಮ ಅಭ್ಯರ್ಥಿ ಇರುವ ಕಡೆ ಸಂಪೂರ್ಣ ಅವರು ಸಹಕಾರ ಕೊಡಬೇಕು. ಎರಡು ಪಕ್ಷದ ಹಿರಿಯ ನಾಯಕರು ಸುದ್ದಿಗೋಷ್ಠಿ ನಡೆಸಿ ಇದಕ್ಕೆಲ್ಲ ಇತಿಶ್ರೀ ಹಾಡುತ್ತಾರೆ. ಆ ನಂತರ ಎಲ್ಲ ಸರಿ ಆಗುತ್ತೆ. ಹಳೆ ಮೈಸೂರು ಭಾಗದಲ್ಲಿ ಎರಡು ಪಕ್ಷಗಳು ಬಲವಾಗಿರೋದೆ ಈ ರೀತಿ ಮಾತುಗಳಿಗೆ ಕಾರಣ. 19ರಂದು ಅಭ್ಯರ್ಥಿ ಪಟ್ಟಿ ಅಂತಿಮವಾಗುವ ನಿರೀಕ್ಷೆ ಇದೆ. ಚುನಾವಣೆಗೆ ಸಕಲ ಸಿದ್ದತೆ ನಡೆಸಿದ್ದೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: