ಪ್ರಮುಖ ಸುದ್ದಿ

ಭಾಗಮಂಡಲದಲ್ಲಿ ನಾಲ್ಕನೇ ಜೇನು ಕೃಷಿ ಕಾರ್ಯಾಗಾರ ಆರಂಭ

ರಾಜ್ಯ(ಮಡಿಕೇರಿ) ಮಾ. 17 : – ಭಾರತ ಸರಕಾರದ ಖಾದಿ ಗ್ರಾಮೋದ್ಯೋಗ ಆಯೋಗ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಧನಸಹಾಯದೊಂದಿಗೆ ಕೊಡಗು ಪ್ರಗತಿ ಪರ ಕೃಷಿಕರ ಕಂಪೆನಿ ಜಂಟಿ ಆಶ್ರಯದಲ್ಲಿ ಭಾಗಮಂಡಲ ಜೇನು ಕೃಷಿ ಕೇಂದ್ರದಲ್ಲಿ ನಾಲ್ಕನೇ ಜೇನು ಕೃಷಿ ಕಾರ್ಯಾಗಾರ ನಡೆಯಿತು.

ಸಂಘದ ಉಪಾಧ್ಯಕ್ಷರಾದ ವಿಠಲ ಅವರ ಅದ್ಯಕ್ಷತೆಯಲ್ಲಿ 15ರಿಂದ 19ರವರೆಗೆ 5 ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಸುಮಾರು 75 ಮಂದಿಗೆ ತರಬೇತಿ ನೀಡಲಾಗಿದೆ. ಮಾಹಿತಿಯ ಪ್ರಕಾರವಾಗಿ ಎಲ್ಲಾ ಫಲಾನುಭವಿಗಳು ಉತ್ತಮ ನಿರ್ವಹಣೆ ಮಾಡಿರುತ್ತಾರೆ.

ಕಾರ್ಯಗಾರದಲ್ಲಿ ಆಯ್ದ 25 ಫಲಾನುಭವಿಗಳಿಗೆ ತರಬೇತಿ ನಂತರ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಸ್ಥೆಯು ಆರ್ಥಿಕ ನೆರವು ನೀಡಲಿದ್ದು, ಪ್ರತಿ ಫಲಾನುಭವಿಗಳಿಗೆ 10 ಜೇನುಪೆಟ್ಟಿಗೆ, 10 ಸ್ಟಾಂಡ್, ಸ್ಮೋಕರ್, ಮುಖ ಪರದೆ ಮತ್ತು ಜೇನು ತೆಗೆಯುವ ಯಂತ್ರವನ್ನು ಉಚಿತವಾಗಿ ನೀಡಲಾಗುವುದು.

ತರಬೇತಿಯನ್ನು ಮಾಸ್ಟರ್ ತರಬೇತಿದಾರರಾದ ಕಾಂತಿಲಾ ಪುರುಷೋತ್ತಮ ನಿರ್ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಕಂಪೆನಿಯ ಕಾರ್ಯದರ್ಶಿಯದ ಅಶೋಕ್, ಲಿಕ್ಕಿಗರಾದ ಸುಧಾ, ನಿರ್ದೇಶಕರುಗಳಾದ ಜೀವನ್, ಪ್ರಸನ್ನ, ಕುಸುಮ, ಕೊಡಗು ಕೃಷಿಪರ ಸಹಕಾರ ಸಂಘದ ತಾಂತ್ರಿಕ ವಿಭಾಗದ ಬಸಪ್ಪ ಭಾಗವಹಿಸಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: