ಪ್ರಮುಖ ಸುದ್ದಿ

ಫೈವ್ ಸ್ಟಾರ್ ಹೇರ್ ಸ್ಟೈಲ್ ಚಾಂಪಿಯನ್ ಶಿಪ್: ಕುಶಾಲನಗರದ ಮನು ಪ್ರಥಮ

ರಾಜ್ಯ(ಮಡಿಕೇರಿ)ಮಾ.17:- ಕುಶಾಲನಗರದ ಲುಕ್ಸ್ ಬ್ಯೂಟಿ ಕೇರ್ ವತಿಯಿಂದ ಪ್ರಥಮ ವರ್ಷದ ಫೈವ್ ಸ್ಟಾರ್ ಹೇರ್ ಸ್ಟೈಲ್ ಚಾಂಪಿಯನ್ ಶಿಪ್ ಪಟ್ಟಣದ ಅತಿಥಿ ಕಂಫರ್ಟ್ಸ್ ಲಾಡ್ಜಿನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಮನು ಪ್ರಥಮ ಸ್ಥಾನವನ್ನು ಗಳಿಸಿ ತಮ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.  ರಾಜ್ಯ ಮಟ್ಟದ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ನಾನಾ ರೀತಿಯ ಕೇಶ ವಿನ್ಯಾಸಕರು ಪಾಲ್ಗೊಂಡಿದ್ದು, ಇದರಲ್ಲಿ ಮನು ಪ್ರಥಮ
ಸ್ಥಾನ ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮವಾದ ವೇದಿಕೆಯನ್ನು ಸೃಷ್ಟಿಸಿದ್ದು, ಇಂತಹ
ವೇದಿಕೆಗಳು ನಮ್ಮಂತಹ ಯುವಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ ಎಂದು ಮನು ತಿಳಿಸಿದ್ದಾರೆ.
ಈ ಸಂದರ್ಭ ಲುಕ್ಸ್ ಬ್ಯೂಟಿ ಕೇರ್ ಮಾಲೀಕರಾದ ಲೋಕೇಶ್, ಹಾಗೂ ಬೇರೆ ಜಿಲ್ಲೆಗಳು ಸೇರಿದಂತೆ ಕೊಡಗಿನ ಪ್ರತಿಭಾವಂತ ಕೇಶ ವಿನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: