ಲೈಫ್ & ಸ್ಟೈಲ್

ತಾಮ್ರದಲ್ಲಿದೆ ಹಲವು ರೋಗನಿರೋಧಕ ಶಕ್ತಿ ..!

ಹಿಂದೆಲ್ಲಾ ತಾಮ್ರದ ಪಾತ್ರೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲಾಗುತ್ತಿತ್ತು. ಆದರೆ ಇಂದು ತಾಮ್ರದ ಪಾತ್ರೆಗಳು ಮಾಯವಾಗುತ್ತಿವೆ. ಅದರಿಂದಾಗುವ ಉಪಯೋಗಗಳ ಅರಿವೂ ಇಂದಿನವರಿಗೆ ಇಲ್ಲವಾಗಿದೆ. ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರನ್ನಿರಿಸಿ ಅದನ್ನು ಮಾರನೆಯ ದಿನ ಬೆಳಿಗ್ಗೆ ಎದ್ದ ತಕ್ಷಣ ಸೇವಿಸಿದಲ್ಲಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದೆನ್ನುವ ವಿಚಾರ ಕೆಲವರಿಗೆ ತಿಳಿದಿಲ್ಲ.

ಥೈರಾಯ್ಡ್ ನಿಂದ ಮುಕ್ತಿ : ತಾಮ್ರ ಪಾತ್ರದಲ್ಲಿರಿಸಲಾದ ನೀರು ಸೇವನೆಯಿಂದ ಇದಲ್ಲಿರುವ ಕಾಪರ್  ಥೈರಾಕ್ಸಿನ್ ಹಾರ್ಮೋನ್ ನ್ನು ನಿಯಂತ್ರಿಸಿ ಥೈರಾಯ್ಡ್ ಬರುವುದನ್ನು ತಡೆಗಟ್ಟುತ್ತದೆ.

ತೂಕ ನಿಯಂತ್ರಣ : ತಾಮ್ರಪಾತ್ರದಲ್ಲಿರಿಸಲಾದ ನೀರನ್ನು ಕುಡಿಯುವುದರಿಂದ ಚಯಾಪಚಯಕ್ರಿಯೆ ಸರಾಗವಾಗಿ ನಡೆದು, ದೇಹದಲ್ಲಿನ ಕೊಬ್ಬಿನಂಶವು ಕರಗಿ ತೂಕ ಹೆಚ್ಚಳವನ್ನು ನಿಯಂತ್ರಿಸುತ್ತದೆ.

ಬ್ಯಾಕ್ಟಿರೀಯಾ ನಾಶ : ತಾಮ್ರದಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಗುಣಗಳಿದ್ದು, ನೀರಿನಲ್ಲಿರುವ ಬ್ಯಾಕ್ಟಿರಿಯಾಗಳನ್ನು ನಾಸಗೊಳಿಸಿ, ಡಯರಿಯಾ, ಲೂಸ್ ಮೋಶನ್ ಗಳು ಬರುವುದನ್ನು ತಡೆಯುತ್ತದೆ.

ಆರೋಗ್ಯಯುಕ್ತ ತ್ವಚೆ : ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿಟ್ಟು ಬೆಳಿಗ್ಗೆ ಅದನ್ನು ಕುಡಿಯಿರಿ. ಇದರಿಂದ ತ್ವಚೆಯು ಆರೋಗ್ಯಕರವಾಗಿರುತ್ತದೆ ಮತ್ತು ಕಾಂತಿಯು ಹೆಚ್ಚುತ್ತದೆ.

ಎಸಿಡಿಟಿ ಮಾಯ : ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಎಂಟುಗಂಟೆಗಳ ಕಾಲ ಇರಿಸಿದ ನೀರನ್ನು ಕುಡಿಯುವುದರಿಂದ ಎಸಿಡಿಟಿ ಮಾಯವಾಗುತ್ತದೆ.

ಮಂಡಿನೋವು ಶಮನ : ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಾಮ್ರ ಪತ್ರಾಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಯೂರಿಕ್ ಆ್ಯಸಿಡ್ ಉತ್ಪತ್ತಿಯಾಗಲಿದ್ದು, ಇದನ್ನು ಸೇವಿಸುವುದರಿಂದ ಮಂಡಿನೋವನ್ನು ಶಮನಗೊಳಿಸಬಹುದು.

ರಕ್ತ ಹೆಚ್ಚಳ : ಅನಿಮಿಯಾ ಅಥವಾ ರಕ್ತಹೀನತೆಯಿಂದ ಬಳಲುವವರು ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ಶರೀರದಲ್ಲಿನ ರಕ್ತ ಹೀನತೆ ಕಡಿಮೆಯಾಗಲಿದೆ.

ಕ್ಯಾನ್ಸರ್ ತಡೆ :ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಆ್ಯಂಟಿ ಆ್ಯಂಕ್ಸಿಡೆಂಟ್ಸ್ ಗಳು ಉತ್ಪತ್ತಿಯಾಗಲಿದ್ದು, ಇವು ಮುಪ್ಪನ್ನು ಮರೆಮಾಚಿ, ಕ್ಯಾನ್ಸರ್ ಬರದಂತೆ ತಡೆಯಲು ಸಹಾಯಕವಾಗಲಿದೆ.

ಹೃದಯ ತೊಂದರೆಯಿಂದ ಮುಕ್ತಿ : ತಾಮ್ರದ ಪಾತ್ರೆಯಲ್ಲಿ 8ರಿಂದ 10ಗಂಟೆಗಳ ಕಾಲ ಶೇಖರಿಸಿಟ್ಟ ನೀರನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಂದು ಹೃದಯ ಆರೋಗ್ಯವಾಗಿರುತ್ತದೆ.

ಒಟ್ಟಿನಲ್ಲಿ ತಾಮ್ರದ ಪಾತ್ರೆಯಲ್ಲಿರಿಸಲಾದ ನೀರನ್ನು ಸೇವಿಸುವುದರಿಂದ ಆರೋಗ್ಯವಂತರಾಗಿರಬಹುದು.

Leave a Reply

comments

Related Articles

error: