
ದೇಶ
ನಕ್ಸಲ್ ದಾಳಿ: ನಾಲ್ವರು ಯೋಧರು ಹುತಾತ್ಮ
ಖಾನಾಪುರ,ಮಾ.18-ಯೋಧರ ಮೇಲೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ದಾಳಿಯಲ್ಲಿ ನಾವಗಾ ಗ್ರಾಮದ ಬಿಎಸ್ಎಫ್ ಯೋಧ ರಾಹುಲ್ ವಸಂತ ಶಿಂಧೆ (25) ಹುತಾತ್ಮರಾಗಿದ್ದಾರೆ.
ಬಿಎಸ್ಎಫ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಹುಲ್, ರಾತ್ರಿ ಕರ್ತವ್ಯ ನಿರ್ವಹಿಸಿ ಮರಳುತ್ತಿದ್ದ
ಸಂದರ್ಭದಲ್ಲಿ ಇವರಿದ್ದ ವಾಹನದ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. (ಎಂ.ಎನ್)