ಮೈಸೂರು

ಯುವತಿಯಿಂದ ಪ್ರೀತಿಗೆ ವಂಚನೆ : ಮರವೇರಿ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

ಮೈಸೂರು,ಮಾ.18:- ತನ್ನ ಪ್ರೀತಿಗೆ ವಂಚನೆ ಮಾಡಿದಳು ಎಂದು ಆರೋಪಿಸಿ ಪಾಗಲ್ ಪ್ರೇಮಿಯೋರ್ವ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ದಾಸಪ್ಪ ವೃತ್ತದಲ್ಲಿದ್ದ ಬೃಹತ್ ಮರವನ್ನೇರಿದ ಮೈಸೂರಿನವನೇ ಆದ ಪಾಗಲ್ ಪ್ರೇಮಿ ಯುವತಿ ತನ್ನ ಪ್ರೀತಿಗೆ ವಂಚಿಸಿದ್ದಾಳೆಂದು ಆರೋಪಿಸಿ ಬೃಹತ್ ಮರವನ್ನೇರಿ ಕಿರುಚುತ್ತಿದ್ದ. ಅದನ್ನು ನೋಡಿದ ಸಾರ್ವಜನಿಕರು ದೇವರಾಜ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಹೆಡ್ ಕಾನ್ಸಟೇಬಲ್ ಮಂಜುನಾಥ್ ಪಾಗಲ್ ಪ್ರೇಮಿಯ ಮನವೊಲಿಸಿ ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕ ತನ್ನ ಬಟ್ಟೆಗಳನ್ನೆಲ್ಲ ಕಿತ್ತುಕೊಂಡು, ಮಾನಸಿಕ ಆಘಾತಕ್ಕೊಳಗಾಗಿದ್ದ ಎನ್ನಲಾಗಿದ್ದು, ಈತನಲ್ಲಿ ಪೊಲೀಸರು ಯುವತಿಯ ಮನೆಯ ವಿವರ ಪಡೆದಿದ್ದಾರೆ. ಯುವತಿ ಕಾಲೇಕೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎನ್ನಲಾಗಿದ್ದು, ಯುವತಿಯನ್ನು, ಆಕೆಯ ತಂದೆ ತಾಯಿಯನ್ನು ಠಾಣೆಗೆ ಕರೆಯಿಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಹೆಸರು, ಹಾಗೂ ಆತ ಎಲ್ಲಿಯ ನಿವಾಸಿ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: