ಮನರಂಜನೆ

ದರ್ಶನ್ ಕ್ಲಿಕ್ ಮಾಡಿದ ಫೋಟೋ ಶ್ರೀಮುರುಳಿಗೆ ಗಿಫ್ಟ್

ಬೆಂಗಳೂರು,ಮಾ.18-ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿರುವ ಹುಲಿಯ ಫೋಟೋವೊಂದು ನಟ ಶ್ರೀಮುರಳಿ ಕೈ ಸೇರಿದೆ.

ಈ ಫೋಟೋವನ್ನು ಶ್ರೀಮುರಳಿ ಉಡುಗೊರೆಯಾಗಿ ಪಡೆದಿದ್ದಾರೆ. ಮದಗಜಸಿನಿಮಾದ ನಿರ್ಮಾಪಕ ಉಮಾಪತಿ ವಿಶೇಷ ಉಡುಗೊರೆಯನ್ನು ತಮ್ಮ ನಾಯಕನಿಗೆ ನೀಡಿದ್ದಾರೆ.

ದರ್ಶನ್ ಕ್ಲಿಕ್ ಮಾಡಿರುವ ಈ ಫೋಟೋ ಮುರಳಿಗೆ ಬಹಳ ಇಷ್ಟವಾಗಿದೆ. ಈ ಫೋಟೋದ ಬೆಲೆ 10 ಸಾವಿರ ರೂ. ಆಗಿದೆ. ಶ್ರೀಮರಳಿ ಸದ್ಯ ಚೇತನ್ ಕುಮಾರ್ ನಿರ್ದೇಶನದಭರಾಟೆಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಸದ್ಯದಲ್ಲಿಯೇಮದಗಜಚಿತ್ರದ ಶೂಟಿಂಗ್ ಕೂಡ ಶುರು ಆಗಲಿದೆ. ಇದುಅಯೋಗ್ಯಖ್ಯಾತಿಯ ಮಹೇಶ್ ಗೌಡ ನಿರ್ದೇಶನದ ಸಿನಿಮಾವಾಗಿದೆ.

ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನಲ್ಲಿ ಪ್ರಾಣಿಗಳ ಫೋಟೋಗಳನ್ನು ತೆಗೆದಿದ್ದರು. ನಂತರ ಫೋಟೋಗಳನ್ನು ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: