ಪ್ರಮುಖ ಸುದ್ದಿಮೈಸೂರು

ನಾಳೆಯಿಂದ ನಗರದಲ್ಲಿ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ

ಮೈಸೂರು,ಮಾ.18 : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರ ವಿಭಾಗ ಹಾಗೂ ಮೈಸೂರಿನ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದಿಂದ ಮಾ.19ರಿಂದ 21ರವರೆಗೆ ಮುಂಬೈ ಅಂತಾರಾಷ್ಟ್ರಿಯ ಕಿರು ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ಸಿದ್ಧಾರ್ಥ ಬಡಾವಣೆಯಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದಲ್ಲಿ ಆಯೋಜಿಸಿರುವ ಚಲನಚಿತ್ರೋತ್ಸವವನ್ನು ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಹಾಗೂ ಸೇನಾನಿಯವರು ಉದ್ಘಾಟಿಸುವರು, ಬಳಿಕ ಅವರೇ ನಿರ್ಮಿಸಿರುವ ವೈಲ್ಡ್ ಡಾಗ್ ಕಿರು ಚಿತ್ರ ಪ್ರದರ್ಶನಗೊಳ್ಳಲಿದೆ, ವಿಜ್ಞಾನಿ ಡಾ.ಜಿ.ಎನ್.ಇಂದ್ರೇಶ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಜೋಷಿ ಜೋಸೆಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿನಿತ್ಯ ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ನಡೆಯುವ ಈ ಚಿತ್ರ ಪ್ರದರ್ಶನದಲ್ಲಿ ಸುಮಾರು ಕನ್ನಡದ 5 ಚಿತ್ರಗಳು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತ ಸಾಕ್ಷ ಹಾಗೂ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ, ಉತ್ಸವದೊಂದಿಗೆ ಕಾರ್ಯಾಗಾರ, ತಜ್ಞರೊಂದಿಗೆ ಸಂವಾದ ನಡೆಯಲಿದೆ ಎಂದು ತಿಳಿಸಿದರು.

ವಸ್ತು ಸಂಗ್ರಹಾಲಯದ ವಿಜ್ಞಾನಿ ಡಾ.ಜಿ.ಎನ್.ಇಂದ್ರೇಶ, ಸಹಾಯಕ ನಿರ್ದೇಶಕ ಜುಮ್ಮಿ ಲೂಕ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: