ಪ್ರಮುಖ ಸುದ್ದಿಮೈಸೂರು

ನಾಯಕತ್ವ ಗುಣದ ಬಗ್ಗೆ ಕಾರ್ಯಾಗಾರ.27.

ಮೈಸೂರು, ಮಾ.18 : ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಇನ್ನಿತರ ಕಡೆ ನಾಯಕತ್ವ ಗುಣ ಪರಿಣಾಮಕಾರಿಯಾಗಿಸುವ ಮೂಲಕ ಅವುಗಳು ಯಶಸ್ವಿಯಾಗಿ ನಡೆಯಲು ನೆರವಾಗುವ ಉದ್ದೇಶದಿಂದ ಮಾ. 27 ರಂದು ನಗರದ ರ‍್ಯಾಡಿಸನ್ ಬ್ಲ್ಯೂ ಹೊಟೇಲ್‌ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘಟಕ ಪ್ರಸಾದ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ  6.30 ರಿಂದ ರಾತ್ರಿ 9.30 ರವರೆಗೆ ಕಾರ್ಯಾಗಾರ ನಡೆಯಲಿದ್ದು, ಕೇರಳದ ಕಲ್ಲಿಕೋಟೆಯ ಭಾರತೀಯ ನಿರ್ವಹಣಾ ಸಂಸ್ಥೆಯ ಪ್ರೊ. ದೇಬಶೀಶ್ ಚಟರ್ಜಿ ಕಾರ್ಯಾಗಾರ ನಡೆಸಿಕೊಡಲಿದ್ದು, ಮೈಸೂರನ್ನು ಕೈಗಾರಿಕೆ, ವಾಣಿಜ್ಯ, ಶೈಕ್ಷಣಿಕ ಚಟುವಟಿಕೆಯಲ್ಲಿ ಬೆಳೆಸುವುದರಲ್ಲಿ ಅವುಗಳ ಮುಖ್ಯಸ್ಥರು ಯಶಸ್ವಿಯಾಗುವಂತೆ ಮಾಡಲು ಈ ಕಾರ್ಯಾಗಾರ ನೆರವಾಗಲಿದೆ.

ನಾಯಕತ್ವ ಗುಣ, ಉತ್ಪಾದಕತೆ, ಸಂಪರ್ಕ, ಸಾಧ್ಯತೆಗಳು ಮೊದಲಾದ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಗಮನ ಹರಿಸಿ ತರಬೇತಿ ನೀಡಲಾಗುವುದೆಂದು ವಿವರಿಸಿದರು.

ಪ್ರೊ. ದೇಬಶೀಶ್ ಚಟರ್ಜಿ, ಡಾ. ರಾಜು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: