ಪ್ರಮುಖ ಸುದ್ದಿಮೈಸೂರು

ಮಾಧ‍್ಯಮಗಳು ಬದಲಾಗಬೇಕು : ಪಂಡಿತ್ ತಾರಾನಾಥ್

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಮಾಧ್ಯಮ ಅಕಾಡೆಮಿ ಪುರಸ್ಕೃತರ ಸನ್ಮಾನ

ಮೈಸೂರು,ಮಾ.18 : ಪ್ರಸಕ್ತ ಸಾಲಿನ ಮಾಧ್ಯಮ ಅಕಾಡೆಮಿ ಪುರಸ್ಕೃತ ಪತ್ರಕರ್ತರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪುರಸ್ಕೃತರನ್ನು ಗೌರವಿಸಿದ ಅಂತರಾಷ್ಟ್ರೀಯ ಸರೋದ್ ವಾದಕ ಪಂಡಿತ್ ತಾರಾನಾಥ್ ಅವರು ಮಾತನಾಡಿ, ಮಾಧ್ಯಮಗಳ ಆಯಾಮ ಬದಲಾಗಬೇಕು, ಕ್ರಿಕೆಟ್, ರಾಜಕೀಯಕ್ಕೆ ನೀಡುವ ಪ್ರಾಧಾನ್ಯತೆಯನ್ನು ಸಂಗೀತಕ್ಕೂ ನೀಡಬೇಕಿದೆ, ಹಣ-ಹೆಣ ಎಣಿಸುವ ಸಂಸ್ಕೃತಿ ನಾಡಿನಲ್ಲಿ ಭಿತ್ತರವಾಗುತ್ತಿದೆ,  ಪರಂಪರೆಯ ಪ್ರತೀಕವಾಗಿರುವ ದೇಶದಲ್ಲಿ ಸಾಕಷ್ಟು ಪಂಡಿತರು, ಸಂಗೀತಗಾರರಿದ್ದು ಅವರತ್ತಲು ಬೆಳಕು ಚೆಲ್ಲುವ ಕಾರ್ಯವಾಗಬೇಕಿದೆ ಮಾಧ್ಯಮಗಳು ಮಾಡಬೇಕಿವೆ ಎಂದು ಸಲಹೆ ನೀಡಿದರು.

ಹಿಂದಿದ್ದ ಘನತೆ ಇಂದಿನ ವಿಶ್ವವಿದ್ಯಾಲಯಗಳಿಗಿಲ್ಲ, ವಿವಿಗಳಲ್ಲಿದ ಸಮಯದಲ್ಲಿಯೇ ಪೀಟಿಲು ಚೌಡಯ್ಯ, ವೀಣೇ ಶೇಷಣ್ಣ ಸೇರಿದಂತೆ ಹೆಸರಾಂತ ಸಂಗೀತಗಾರರು ಬೆಳೆದು ಬಂದಿದ್ದರು, ಆದರಿಂದು ಸಂಗೀತಕ್ಕಾಗಿ ವಿಶ್ವವಿದ್ಯಾಲಯವೇ ಇದ್ದರೂ ಒಬ್ಬ ಉತ್ತಮ ಸಂಗೀತಗಾರರ ಹೊರಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಮೇರಿಕಾದಂತಹ ದೇಶವೇ ಭಾರತದಲ್ಲಿನಾ ಸಂಗೀತಗಾರರನ್ನು ಕರೆಸಿ ಸಂಗೀತ ಕುರಿತು ತಿಳಿದುಕೊಳ್ಳಲು ಹಂಬಲಿಸುತ್ತದೆ, ಆದರೆ ಮೈಸೂರಿನಲ್ಲಿರುವ ಸಂಗೀತ ವಿವಿಯವರು ಸಂಗೀತ ಪದವೀಧರರು ಸಿಗುತ್ತಿಲ್ಲ ಎನ್ನುವ ಕುಂಟು ನೆಪವೇಳುತ್ತಿದೆ. ಇದರಿಂದ ಎಲ್ಲವೂ ಕಾಟಾಚಾರ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ ಎಂದು ವಿಷಾಧಿಸಿದರು.

ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿಯವರು ಮಾತನಾಡಿ ಮೈಸೂರಿಗೆ ತನ್ನದೇ ಆದ ಸಂಸ್ಕೃತಿ ಪರಂಪರೆಯಿದ್ದು ಅದನ್ನು ಇಲ್ಲಿನ ಪತ್ರಕರ್ತರು ಗೌರವಿಸುತ್ತಾ ಬಂದಿದ್ದಾರೆ, ಗ್ರಾಮೀಣ ಭಾಗದಲ್ಲಿ ಇನ್ನೂ ಸಮಸ್ಯೆಗಳಿದ್ದು ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಮಾಧ್ಯಮ ಅಕಾಡೆಮಿ ಸದಸ್ಯ ಕೆ.ಶಿವಕುಮಾರ್, ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮಾತನಾಡಿದರು,  ಪುರಸ್ಕೃತರಾದ ಪ್ರಜಾವಾಣಿ ಸ್ಥಾನಿಕ ಸಂಪಾದಕ ಕೆ.ಜೆ.ಮರಿಯಪ್ಪ, ಸ್ಟಾರ್ ಆಫ್ ಮೈಸೂರು ಕಾರ್ಯನಿರ್ವಾಹಕ ಸಂಪಾದಕಿ ಮೀರಾ ಅಪ್ಪಯ್ಯ, ಆಂದೋಲನ ಪತ್ರಿಕೆ ವರದಿಗಾರ ಆಲ್ಫ್ರೆಡ್ ಸಾಲೋಮನ್ ಇವರುಗಳನ್ನು ಸಂಘದಿಂದ ಗೌರವಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ಹಾಗೂ ಪದಾಧಿಕಾರಿಗಳು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: