ಮೈಸೂರು

ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನಿಧನಕ್ಕೆ ಸಂತಾಪ

ಮೈಸೂರು,ಮಾ.18:- ವಿಪ್ರ ಸಹಾಯವಾಣಿ ವತಿಯಿಂದ ಗೋವಾ ಮುಖ್ಯಮಂತ್ರಿಗಳಾಗಿದ್ದ ಮನೋಹರ ಪರಿಕ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸಂಚಾಲಕರಾದ ಜಯಸಿಂಹ ಶ್ರೀಧರ್ ಮಾತನಾಡಿ ಮನೋಹರ ಪರಿಕ್ಕರ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೆಲಸದ ಮೇಲಿನ ಬದ್ಧತೆ ಹಾಗೂ ಜವಾಬ್ದಾರಿ ನಿರ್ವಹಣೆಯಲ್ಲಿ ಮನೋಹರ ಪರಿಕ್ಕರ್ ಅವರಿಗೆ ಮನೋಹರ್ ಪರಿಕ್ಕರ್ ಅವರೇ ಸಾಟಿ.  ಅಧಿಕಾರ ಹಾಗೂ ಆಡಂಬರದ ರಾಜಕೀಯ ಜೀವನ ಶೈಲಿಯನ್ನು ಹೊಂದಿರುವ ಬಹುತೇಕ ರಾಜಕೀಯ ವ್ಯಕ್ತಿಗಳ ಮಧ್ಯೆ ತನ್ನ ಕಾರ್ಯ ಬದ್ಧತೆಯಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಬದುಕಿನ ಕೊನೆಯ ಕ್ಷಣದವರೆಗೂ ಜವಾಬ್ದಾರಿ ನಿರ್ವಹಣೆಯಲ್ಲಿ ಸಾರ್ಥಕತೆಯನ್ನು ಮೆರೆದ ಪರಿಕ್ಕರ್ ಜಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ತಿಳಿಸಿದರು. (ಎಸ್.ಎಚ್)

Leave a Reply

comments

Related Articles

error: