
ಮೈಸೂರು
ಏಪ್ರೀಲ್ ಹತ್ತಕ್ಕೆ ಮೈಸೂರಿಗೆ ಬಿಎಸ್ಪಿ ನಾಯಕಿ ಮಾಯಾವತಿ : ಶಾಸಕ ಎನ್ ಮಹೇಶ್
ಮೈಸೂರು,ಮಾ.18:- ಏಪ್ರೀಲ್ ಹತ್ತಕ್ಕೆ ಮೈಸೂರಿಗೆ ಬಿಎಸ್ಪಿ ನಾಯಕಿ ಮಾಯಾವತಿ ಆಗಮಿಸಲಿದ್ದಾರೆಂದು ಶಾಸಕ ಎನ್ ಮಹೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ನಾವು 28 ಕ್ಷೇತ್ರಗಳಲ್ಲೂ ಸ್ವತಂತ್ರ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ. ಎಲ್ಲ ಕ್ಷೇತ್ರದಲ್ಲೂ ಗೆಲ್ಲುವ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದರು. ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಫೈನಲ್.ಮಾಡುತ್ತೇವೆ. ಅಲ್ಲದೇ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಸಮರ್ಥ ಅಭ್ಯರ್ಥಿ ಕಣಕ್ಕೆ ಇಳಿಸುವುದರ ಜೊತೆಗೆ ಗೆಲುವನ್ನು ಸಾಧಿಸುತ್ತೇವೆ ಎಂದರು. ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಸಚಿವರಾದ ಪ್ರಸಾದ್ ಅವರು ಸ್ಪರ್ಧೆ ಮಾಡಿದರೂ ಭಯ ಇಲ್ಲ ಎಂದಿದ್ದಾರೆ. (ಕೆ.ಎಸ್,ಎಸ್ಎಚ್)