Uncategorized

ವಿದ್ವಾನ್ ವಿವೇಕ ಮೂಜಿಕ್ಕುಳಂ ಅವರಿಂದ ಬೆಳದಿಂಗಳ ಸಂಗೀತ ಕಾರ್ಯಕ್ರಮ .21.

ಮೈಸೂರು,ಮಾ.18 : ಮೈಸೂರಿನ ಸುತ್ತೂರು ಶಾಖಾಮಠದಲ್ಲಿ ನಡೆಸುವ ಬೆಳದಿಂಗಳ ಸಂಗೀತ ಕಾರ್ಯಕ್ರಮದ ಈ ತಿಂಗಳ ಅತಿಥಿಯಾಗಿರುವ ವಿದ್ವಾನ್ ವಿವೇಕ್ ಮೂಜಿಕ್ಕುಳಂ ಅವರಿಂದ ಮಾ.21ರ ಸಂಜೆ 6 ಗಂಟೆಯಿಂದ ಸಂಗೀತ ಕಾರ್ಯಕ್ರಮವನ್ನು ಮಠದ ಅಂಗಳದಲ್ಲಿ ಏರ್ಪಡಿಸಲಾಗಿದೆ.

ಕೇರಳ ಮೂಲದ ಪ್ರತಿಭಾವಂತ ಸಂಗೀತಗಾರರಾದ ವಿವೇಕ್ ಮೂಜಿಕ್ಕುಳಂ ಅವರು ವಿದ್ವಾನ್ ವಿ.ಆರ್ ದಿಲೀಪ್ ಕುಮಾರ್ ಅವರ ಬಳಿ ಆರಂಭಿಕ ಸಂಗೀತ ಶಿಕ್ಷಣ ಅಭ್ಯಾಸ ನಂತರ ಚೆನ್ನೈನ ವಿದ್ವಾನ ಸಿ.ಆರ್.ವೈದ್ಯನಾಥ್ ಅವರ ಬಳಿ ಉನ್ನತ ಅಭ್ಯಾಸ. ಎಂ.ಎ.ಮ್ಯೂಸಿಕ್ ಪದವೀಧರರು, ತ್ರಿಚೂರು ಆಕಾಶವಾಣಿಯ ಬಿ-ಹೈಶ್ರೇಣಿ ಕಲಾವಿದರು, ಕೇರಳ ಸರ್ಕಾರ ನೀಡುವ ಚೆಂಬೈ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ವಿದ್ವಾನ್ ವಿ.ಎಸ್.ಗೋಕುಲ್ ಅವರು ಸುರೇಂದ್ರನ್  ಅಲಂಕೋಡ್ ಮತ್ತು ಎಡಪ್ಪಳ್ಳಿ ಅಜಿತ್ ಕುಮಾರ್ ಅವರು ಬಳಿ ವಯೋಲಿನ್ ವಾದನ ಅಭ್ಯಾಸ ಮಾಡಿದ್ದಾರೆ.ಅಕಾಶವಾಣಿಯ ಬಿ ಶ್ರೇಣಿ ಕಲಾವಿದರಾಗಿದ್ದಾರೆ.

ವಿದ್ವಾನ್ ಬಿ.ಸಿ.ಮಂಜುನಾಥ್ ಅವರು ತಂದೆ ಡಾ.ಬಿ.ಕೆ.ಚಂದ್ರಮೌಳಿ ಬಳಿ ಮೃದಂಗ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಪ್ರಶಸ್ತಿಗಳು ಲಭಿಸಿದ್ದು ಇವರು ದೂರದರ್ಶನದ ಎ ಶ್ರೇಣಿ ಕಲಾವಿದರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: