ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಜೆಎಸ್ಎಸ್ ನಲ್ಲಿ ಥೈರಾಯಿಡ್ ತಪಾಸಣಾ ಶಿಬಿರ

ಮೈಸೂರು,ಮಾ.18 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಿಂದ ಮಾ.19 ರಿಂದ 23ರವರೆಗೆ ಥೈರಾಯಿಡ್ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ತೂಕ ಹೆಚ್ಚುವುದು, ಕೂದಲು ಉದುರುವುದು, ಮಲಬದ್ಧತೆ, ಅತಿ ಹೆಚ್ಚು ನಿದ್ರೆ, ಮಹಿಳೆಯರಿಗೆ ಮಾಸಿಕ ತೊಂದರೆ ಇನ್ನಿತರ ಸಮಸ್ಯೆಗಳು ಕಂಡು ಬಂದಲ್ಲಿ ವೈದ್ಯರ ಬಳಿ ತಪಾಸಣೆ ನಡೆಸಿಕೊಳ್ಳಬಹುದಾಗಿದೆ. ವಿವರಗಳಿಗೆ ಮೊ.ಸಂ. 9844549152, 9686677218 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: