ಪ್ರಮುಖ ಸುದ್ದಿ

ಉರುಳಿಗೆ ಸಿಲುಕಿ ಹುಲಿ ಬಲಿ : ಹರಿಹರ ಗ್ರಾಮದಲ್ಲಿ ಘಟನೆ

ರಾಜ್ಯ(ಮಡಿಕೇರಿ) ಮಾ.19 :- ಉರುಳಿಗೆ ಸಿಲುಕಿ ಹುಲಿ ಮರಿಯೊಂದು ಸಾವಿಗೀಡಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ.
ಸುಮಾರು ಎರಡು ವರ್ಷದ ಹುಲಿ ಇದಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಉರುಳು ಅಳವಡಿಕೆ ಮತ್ತು ಹುಲಿ ಸಾವಿನ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಈ ಗ್ರಾಮ ವ್ಯಾಪ್ತಿಯಲ್ಲಿ ಹುಲಿದಾಳಿಗೆ ಜಾನುವಾರುಗಳು ಬಲಿಯಾಗಿದ್ದವು. ಆದರೆ ಉರುಳಿಗೆ ಬಲಿಯಾದ ಹುಲಿಯೇ ಜಾನುವಾರುಗಳನ್ನು ಭಕ್ಷಿಸಿರುವ ಬಗ್ಗೆ ಖಾತ್ರಿ ಇಲ್ಲ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: