ಮೈಸೂರು

ಕೆ.ಆರ್ ಆಸ್ಪತ್ರೆಯ ಅಭಿವೃದ್ಧಿಯನ್ನು ಶೀಘ್ರದಲ್ಲಿಯೇ ಮಾಡುವಂತೆ ಒತ್ತಾಯಿಸಿ  ಶಾಸಕ ರಾಮದಾಸ್  ನೇತೃತ್ವದಲ್ಲಿ ಪ್ರತಿಭಟನೆ

ಮೈಸೂರು,ಮಾ.19:- ಮೈಸೂರಿನ ಕೆ.ಆರ್ ಆಸ್ಪತ್ರೆಯ ಅಭಿವೃದ್ಧಿಯನ್ನು ಶೀಘ್ರದಲ್ಲಿಯೇ ಮಾಡುವಂತೆ ಒತ್ತಾಯಿಸಿ, ಆಯುಷ್ಮಾನ್ ಭಾರತದ ಯೋಜನೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತಗೊಳಿಸಬೇಕೆಂದು ಆಗ್ರಹಿಸಿ ರಾಜ್ಯಸರ್ಕಾರದ ವಿರುದ್ಧ  ಶಾಸಕ ರಾಮದಾಸ್  ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಇಂದು ಮೈಸೂರಿನ‌ ಕೆ.ಆರ್ ಆಸ್ಪತ್ರೆಗೆ ಶಾಸಕ ರಾಮದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ನಿನ್ನೆ   ಶಾಸಕ ಎಲ್ ನಾಗೇಂದ್ರ ಹಾಗೂ ಶಾಸಕ. ರಾಮದಾಸ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ಶಾಸಕ ರಾಮದಾಸ್ ಹೊರ ರೋಗಿಗಳನ್ನು ಭೇಟಿ  ಮಾಡಿ ಸಮಸ್ಯೆಯನ್ನು ವಿಚಾರಿಸಿದರು. ಬಳಿಕ ಕೆ.ಆರ್.ಆಸ್ಪತ್ರೆಯ ಮುಂಭಾಗ ಮೈಸೂರಿನ ಕೆ.ಆರ್.ಆಸ್ಪತ್ರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದು, ಸರ್ಕಾರಕ್ಕೆ 350ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದು  ಕೇವಲ 35ಕೋಟಿ ಹಣ ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಿಂದ ಅಭಿವೃದ್ಧಿ ಮಾಡೋದಕ್ಕೆ  ತೊಂದರೆಯಾಗಿದೆ. ಬಡ ರೋಗಿಗಳಿಗೆ ಚಿಕಿತ್ಸೆ ಹಾಗೂ ಕೆ.ಆರ್.ಆಸ್ಪತ್ರೆ ಅಭಿವೃದ್ಧಿ ಮಾಡೋದಕ್ಕೆ ಸಮಸ್ಯೆ ಆಗಿದೆ ಎಂದು ಆರೋಪಿಸಿದರು. ಕೆ.ಆರ್ ಆಸ್ಪತ್ರೆಯಲ್ಲಿ  ಸಿಬ್ಬಂದಿಗಳು ಹಾಗೂ ಉಪಕರಣಗಳ ಕೊರತೆ ಕುರಿತು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.   ಆಯುಷ್ಮಾನ್ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.

ಯಾವುದೇ ರಾಜ್ಯದಲ್ಲಿ ಆಯುಷ್ಮಾನ್ ಯೋಜನೆಯಲ್ಲಿಲ್ಲದ ತೊಂದರೆ ರಾಜ್ಯದಲ್ಲಿ ಮಾತ್ರ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಯುಷ್ಮಾನ್ ಭಾರತ -ಆರೋಗ್ಯ ಕರ್ನಾಟಕ ಯೋಜನೆ ರೂಪುರೇಷೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: