ಮನರಂಜನೆ

ಟ್ವಿಟರ್ ತೊರೆಯಬೇಕಾಗುತ್ತದೆ ಎಂದ ಕಿಚ್ಚ ಸುದೀಪ್

ಬೆಂಗಳೂರು,ಮಾ.19-ನೀವು ಇದೇ ರೀತಿ ಮಾಡುವುದಾದರೆ ನಾನು ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣವನ್ನು ತೊರೆಯಬೇಕಾಗುತ್ತದೆ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

ರಕ್ತದಲ್ಲಿ ಪತ್ರ ಬರೆಯುವ, ಕೈಗೆ ಗಾಯ ಮಾಡಿಕೊಂಡು ಹೆಸರು ಬರೆಯುವ ಎಲ್ಲಾ ಅಭಿಮಾನಿಗಳ ವಿರುದ್ಧ ಕಿಚ್ಚ ಸುದೀಪ್ ಬೇಸರ ಮಾಡಿಕೊಂಡಿದ್ದಾರೆ.

ಕಿಚ್ಚನ ಅಭಿಮಾನಿಯೊಬ್ಬರು ಕೈಗೆ ಗಾಯಮಾಡಿಕೊಂಡು ರಕ್ತದಲ್ಲಿ ಕಿಚ್ಚ ಎಂದು ಬರೆದು ಫೋಟೋ ತೆಗೆದು ಟ್ವೀಟರ್ನಲ್ಲಿ ಸುದೀಪ್ಗೆ ಟ್ಯಾಗ್ ಮಾಡಿದ್ದರು. ಅದನ್ನು ನೋಡಿದ ಸುದೀಪ್ ಅಸಹಾಯಕತೆಯಿಂದ, ನೋವಿನಿಂದ ಪತ್ರ ಬರೆದಿದ್ದಾರೆ. ಪತ್ರ ಇಲ್ಲಿದೆ.

ಇದು ಪ್ರೀತಿ ತೋರಿಸುವ ವಿಧಾನವಲ್ಲ. ರೀತಿ ಫೋಟೋ ನೋಡುವುದಕ್ಕೆ ತುಂಬಾ ಹಿಂಸೆ ಆಗುತ್ತದೆ. ನೀವು ನನ್ನ ಮಾತಿಗೆ ಬೆಲೆ ಕೊಡುವುದೇ ಆದರೆ ದಯವಿಟ್ಟು ರೀತಿ ಮಾಡಿಕೊಳ್ಳಬೇಡಿ. ನಾನು ಟ್ವಿಟರ್ನಲ್ಲಿ ಇರುವದರಿಂದ ತಾನೇ ನೀವು ರೀತಿ ಮಾಡಿಕೊಳ್ಳುವುದು. ನೀವು ಇದನ್ನೇ ಮುಂದುವರಿಸುವುದಾದರೆ ನಾನು ಟ್ವಿಟರ್, ಸೋಷಲ್ ಮೀಡಿಯಾ ತೊರೆಯಬೇಕಾಗುತ್ತದೆ ಎಂದಿದ್ದಾರೆ.

ಕಿಚ್ಚ ಬೇಸರ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ತಮ್ಮನ್ನು ತಾವು ಹಿಂಸೆ ಮಾಡಿಕೊಳ್ಳುವ ಅಭಿಮಾನಿಗಳ ಕುರಿತು ನೋವು ವ್ಯಕ್ತಪಡಿಸಿದ್ದರು. ಈಗ ಮತ್ತೆ ಅಭಿಮಾನಿಗಳ ಪರವಾಗಿ ಟ್ವಿಟರ್ ತೊರೆಯುವ ಮಾತುಗಳನ್ನಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: