ಮೈಸೂರು

ನಾಗರಂಜಿತ ಶಿವರಾಮನ್ ರಂಗಪ್ರವೇಶ ‘ಫೆ.3ಕ್ಕೆ’

ಭರತನಾಟ್ಯ ಕಲಾವಿದೆ ನಾಗರಂಜಿತ ಶಿವರಾಮನ್ ಅವರ ರಂಗಪ್ರವೇಶ ಕಾರ್ಯಕ್ರಮವನ್ನು ಫೆ.3ರ ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರೊ.ಎಂ.ಎಸ್.ವಿರೇಂದ್ರ ಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳ ಶಂಕರ್, ರಾಷ್ಟ್ರೀಯ ದೂರದರ್ಶನದ (ದಕ್ಷಿಣ ವಲಯದ) ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿ, ರಸವೃಂದ ನೃತ್ಯ ಅಕಾಡೆಮಿಯ ಸಂಸ್ಥಾಪಕಿ ಹಾಗೂ ನಿರ್ದೇಶಕಿ ನಂದಿನಿ ಈಶ್ವರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಕುಲಸಚಿವ ಎ.ಎಸ್.ನಾಗರಾಜ್ ಉಪಸ್ಥಿತರಿರುವರು.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ನಾಗರಂಜಿತ ಶಿವರಾಮನ್ ಬಾಲ್ಯದಿಂದಲೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದು ಸುಧಾನಾಗರಾಜ್‍ ಅವರ ಶಿಷ್ಯೆಯಾಗಿದ್ದಾರೆ.

ಸುಧಾನಾಗರಾಜ್, ಕಲಾವಿದೆಯ ತಾಯಿ ರೇಖಾ ಮಠಪತಿ, ನಾಗರಂಜಿತ ಶಿವರಾಮನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: