ಪ್ರಮುಖ ಸುದ್ದಿಮೈಸೂರು

ಸೂಕ್ಷ್ಮ ಮತಗಟ್ಟೆಗಳೆಂದು ಘೋಷಣೆ : ವರ್ಗಾವಣೆಗೆ ಒತ್ತಾಯ

ಮೈಸೂರು, ಮಾ.19 : ಈ ಬಾರಿಯ ಲೋಕಸಭಾ ಚುನಾವಣೆ ಮತದಾನ ವೇಳೆ ವೇಳೆ ಕೆಲ ಕಿಡಿಗೇಡಿಗಳು ಅಶಾಂತಿಯುತ ಘಟನೆಗಳಿಗೆ ಕಾರಣವಾಗಬಹುದಾದ ಹಿನ್ನೆಲೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿನ 19,20, 21, 22 ಮತಗಟ್ಟೆಗಳನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಬಿಜೆಪಿ ಮುಖಂಡ ವಿ. ಗಿರಿಧರ್ ಆಗ್ರಹಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪಾಲಿಕೆ ಚುನಾವಣೆ ವೇಳೆ ಈ ಸ್ಥಳಗಳಲ್ಲಿ ಆಗಿನ ಪಾಲಿಕೆ ಚುನಾವಣೆ ಅಭ್ಯರ್ಥಿ ಸಾತ್ವಿಕ್ ಸಂದೇಶ್‌ಸ್ವಾಮಿ ಮೇಲೆ ಹಲ್ಲೆ ಯತ್ನವೂ ನಡೆದಿದ್ದು, ಈಗ ಎರಡು ಪಕ್ಷಗಳೂ ಮೈತ್ರಿ ಹಿನ್ನೆಲೆಯಲ್ಲಿ ಒಂದುಗೂಡಿರುವುದರಿಂದಾಗಿ ಅವುಗಳ ಕಾರ್ಯಕರ್ತರಿಗೆ ಆನೆಬಲ ಬಂದಂತಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಮತ ಹಾಕುವವರಿಗೆ ಬೆದರಿಕೆ ಉಂಟುಮಾಡಬಹುದಾದ ಸಾಧ್ಯತೆ ಇದೆ.

ಹೀಗಾಗಿ ಚುನಾವಣಾಧಿಕಾರಿಗಳು ಎಲ್ಲ ಪಕ್ಷಗಳ ಪ್ರಮುಖರನ್ನು ಒಂದೆ ಸಭೆ ಸೇರಿಸಿ ಶಾಂತಿಪಾಲನೆಗೆ ಸೂಚನೆ ನೀಡಬೇಕು. ಇನ್ನು, ಈ ಹಿಂದೆ ಮಂಡಿ ಮೊಹಲ್ಲಾದಲ್ಲಿ ತಮ್ಮ ಮೇಲೆ ಮಾರಣಾಂತಕ ಹಲ್ಲೆ ಸಹಾ ಆಗಿದ್ದು, ಆ ಭಾಗದ ಒಂದು ಕೋಮಿನ ಮತದಾರರು ಮತ ಚಲಾವಣೆಗೆ ಬಂದಾಗ ಬೆದರಿಸುವ, ಬಲವಂತದ ಮತದಾನ ಮಾಡಿಸುವ, ಇಲ್ಲವೇ ನಕಲಿ ಮತದಾನದ ಸಾಧ್ಯತೆ ಇರುವ ಕಾರಣ ಈ ಮತಗಟ್ಟೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಬೇಕೆಂದು ಕೋರಿದರು.

ಪಕ್ಷದ ಮುಖಂಡರಾದ ರವೀಂದ್ರ, ಸ್ವಾಮಿಗೌಡ, ವಕೀಲ ಶಿವರಾಜ್, ಅಯ್ಯಪ್ಪ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: