ಮೈಸೂರು

ನಕಲಿ ಹಾಗೂ ದಲ್ಲಾಳಿ ಹಾವಳಿ ತಡೆಗೆ ಸರ್ಕಾರಕ್ಕೆ ಆಗ್ರಹ

ನಕಲಿ ಗುರುತಿನ ಚೀಟಿದಾರರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ದಲ್ಲಾಳಿಗಳು ಕಾರ್ಮಿಕರಲ್ಲದವರಿಗೂ ಸರ್ಕಾರ ದಿನಗೂಲಿ ಕಾರ್ಮಿಕರ ಗುರುತಿನ ಚೀಟಿ ನೀಡುವ ದಂಧೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಕರ್ನಾಟಕ ರಾಜ್ಯ ಭಾರತಮತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜಿ.ಸಿದ್ದರಾಜು ನೇರವಾಗಿ ಆರೋಪಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಮಾತನಾಡಿ  ನಕಲಿ ಗುರುತಿನ ಚೀಟಿದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಸಂಘದಿಂದ ಮಾಡಿದ ಮನವಿಗೆ ಸೂಕ್ತರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ದಿನಗೂಲಿ ನೌಕರರಿಗೂ ಹಾಗೂ ಕಟ್ಟಡ ನೌಕರ ನಡುವೆ ವ್ಯತ್ಯಾಸವಿದೆ. ರಾಚಪ್ಪನಂತಹ ಬೊಗಳೆ ಕಾರ್ಮಿಕ ಸಂಭಾವನೆ ಹೆಸರಿನಲ್ಲಿ ಅಮಾಯಕ ಕಾರ್ಮಿಕರನ್ನು ಮನೆ ಕಟ್ಟಿಸಿಕೊಡುವುದಾಗಿ ವಂಚಿಸಿ ಅವರುಗಳಿಂದ ಹಣ ವಸೂಲಿ ಮಾಡುತ್ತಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ವಿಶಾಲಾ ಮೈಸೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ನಾಗರಾಜು ಎಂ.ಪಿ. ಕರ್ನಾಟಕ ಪ್ರದೇಶ ಕಟ್ಟಡ ಕಾರ್ಮಿಕರ ಸಂಘ ಪ್ರಧಾನ ಕಾರ್ಯದರ್ಶಿ ಮಣಿ, ವಿನಾಯಕ ಕಾವೇರಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಖಜಾಂಚಿ ಕುಮಾರ್ ಸಿ ಹಾಗೂ ಕಟ್ಟಡ ಕಾರ್ಮಿಕರ ಫೆಡರೇಷನ್ ರಾಜ್ಯ ಕಾರ್ಯದರ್ಶಿ ರಮೇಶ್ ಇವರುಗಳು ನಕಲಿ ಹಾಗೂ ದಲ್ಲಾಳಿಗಳ ಹಾವಳಿಯನ್ನು ತಡೆದು ನಿಜ ಕಾರ್ಮಿಕರಿಗೆ ನ್ಯಾಯ ದೊರಕಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು.

 

Leave a Reply

comments

Related Articles

error: