ಮೈಸೂರು

ಕಲಾವಿದರಿಗೆ ಸರ್ಕಾರಿ ಉದ್ಯೋಗ ಮೀಸಲಾತಿ ನೀಡಿ : ಪ್ರೊ.ನಂಜಯ್ಯ ಹೊಂಗನೂರು ಅಭಿಮತ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಸಂಯುಕ್ತಾಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ನಾಟಕ ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಮೈಸೂರು ವಿವಿಯ ಕುವೆಂಪು ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಹರ್ಷದಾಯಕವೆಂದು ಸಂಸ್ಥೆಯ ನಿರ್ದೇಶಕಿ ಪ್ರೊ.ಪ್ರೀತಿ ಶ್ರೀಮಂಧರ್‍ಕುಮಾರ್‍ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನೃತ್ಯ ತಂಡ ಹಾಗೂ ತರಬೇತಿದಾರ ಸುಂದರೇಶ್ ಅವರುಗಳನ್ನು ಕರ್ನಾಟಕ ಜಾನಪದ ಪದವೀಧರರ ಬಳಗದಿಂದ ಸನ್ಮಾನಿಸಿ ಮಾತನಾಡಿ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ವಿಭಾಗೀಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯು ಅನಾವರಣಗೊಂಡಿದೆ. ಆಧುನಿಕ ಭರಾಟೆಯಲ್ಲಿ ಜನಪದ ಕಲೆಯು ಮತ್ತು ಕಲಾವಿದರ ಕಡೆಗಣಿಸಲಾಗುತ್ತಿದೆ, ಜಾನಪದ ಕಲೆಯನ್ನು ಉತ್ತೇಜಿಸಲಾಗುತ್ತದೆ ಎಂದು ತಿಳಿಸಿದರು.

ಡಾ.ಎಂ.ನಂಜಯ್ಯ ಹೊಂಗನೂರು ಮಾತನಾಡಿ ಜಾಗತಿಕ ಆಧುನೀಕರಣದಿಂದ ಜಾನಪದ ಕಲೆಯು ನಶಿಸುತ್ತಿದ್ದು ಸರ್ಕಾರವು ಪದವಿ ಪೂರ್ವ ಮಟ್ಟದಿಂದಲೇ ಜಾನಪದ ಕಲೆಯನ್ನು ವಿವಿಗಳಲ್ಲಿ ತೆರೆಯಬೇಕು, ಕಲಾವಿದರಿಗೆ ವಿಶೇಷ ಅರ್ಹತೆ ಮೇಲೆ ಸರ್ಕಾರಿದಿಂದ ಉದ್ಯೋಗ ಮೀಸಲಾತಿ ನೀಡಿದರೆ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿದಂತಾಗಿ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಪೂರಕವೆಂದು  ತಿಳಿಸಿದರು.

ಕರ್ನಾಟಕ ಜಾನಪದ ಪದವೀಧರ ಬಳಗದ ಅಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ಮಂಜು ಹೆಚ್.ಪಿ, ದಿನೇಶ್ ಎಂ.ಎನ್. ಸುನೀತಾ, ಉಪಾಧ್ಯಕ್ಷ ಜಗದೀಶ್, ಡಾ.ಕೆ.ಎಂ.ವರದರಾಜನ್ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

comments

Related Articles

error: