ಪ್ರಮುಖ ಸುದ್ದಿ

ಮಹಾರಾಷ್ಟ್ರದ ವಿಧಾನಸಭೆ ಪ್ರತಿಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ತಮ್ಮ ಹುದ್ದೆಗೆ ರಾಜೀನಾಮೆ

ದೇಶ(ಮಹಾರಾಷ್ಟ್ರ)ಮಾ.19:- ಲೋಕಸಭಾ ಚುನಾವಣೆ ಮುಗಿಯುವ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಆಘಾತದ ಮೇಲೆ ಆಘಾತಗಳಾಗುತ್ತಿದ್ದು, ಪಕ್ಷಕ್ಕೆ ಹಿನ್ನಡೆಯಾಗುತ್ತಲೇ ಇದೆ.

ಮಹಾರಾಷ್ಟ್ರದ ವಿಧಾನಸಭೆ ಪ್ರತಿಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದವಾರವಷ್ಟೇ ಅವರ ಪುತ್ರ ಸಜಯ್ ವಿಖೆ ಪಾಟೀಲ್ ಕಾಂಗ್ರೆಸ್ ತೊರೆದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖ ಬಿಜೆಪಿ ಸೇರಿದ್ದರು. ಇದೀಗ ರಾಧಾಕೃಷ್ಣ ಪಾಟೀಲ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದೆ. ಪುತ್ರನ ನಡವಳಿಕೆಯಿಂದ ಆಘಾತಗೊಂಡಿದ್ದ ಇವರು ಪ್ರತಿಪಕ್ಷದ ನಾಯಕರಾಗಿರುವುದರಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯನ್ನು ಈ ಬಾರಿ ಮಣಿಸಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್ ಗೆ  ಭಾರೀ ಹೊಡೆತ ಬಿದ್ದಿದೆ. (ಎಸ್.ಎಚ್)

 

Leave a Reply

comments

Related Articles

error: