ಸುದ್ದಿ ಸಂಕ್ಷಿಪ್ತ

ದಿ.21ರಂದು ರಂಗ ಸಂಭ್ರಮ

ಮೈಸೂರು,ಮಾ.19 : ಹಿರಿಯ ನಾಗರೀಕರ ಸೇವಾ ಸಮಿತಿಯಿಂದ ‘ರಂಗ ಸಂಭ್ರಮ’ ರಂಗಗೀತೆಗಳ ಗಾಯನ ಹಾಗೂ ರಂಗಭೂಮಿಯ ನೆನಪುಗಳ ಪ್ರಸ್ತುತಿಯನ್ನು ಮಾ.21ರ ಬೆಳಗ್ಗೆ 10.30ಕ್ಕೆ ಸಂಗಮ ವೃತ್ತದ ಬಳಿಯಿರುವ ನಾರಾಯಣಾಮೃತ ಫೌಂಡೇಷನ್ ನಲ್ಲಿ ಏರ್ಪಡಿಸಲಾಗಿದೆ.

ಕಲಾವಿದರಾದ ಕಿರಗಸೂರು ರಾಜಪ್ಪ, ಎಂ.ಎಸ್.ವೆಂಕಟರಾಮ್ ಕುಪ್ಯ, ಹೆಚ್.ಎಸ್.ಗೋವಿಂದಗೌಡ ಭಾಗವಹಿಸುವರು. ಸಮಿತಿ ಅಧ್ಯಕ್ಷ ಎನ್.ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: