ಮೈಸೂರು

ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್ ಮೆಮೋರಿಯಲ್ ಕಪ್ ಫುಟ್‍ಬಾಲ್ ಪಂದ್ಯಾವಳಿ ಜ.27 ರಿಂದ 29ರವರೆಗೆ

ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್ ಮೆಮೋರಿಯಲ್ ಕಪ್ ಫುಟ್‍ಬಾಲ್ ಪಂದ್ಯಾವಳಿ ಸೀಸನ್ 2 ಅನ್ನು ಮೈಸೂರಿನ ಬ್ರದರ್ಸ್ ಫುಟ್‍ಬಾಲ್ ಕ್ಲಬ್‍ನಿಂದ ಆಯೋಜಿಸಲಾಗಿದೆ ಎಂದು ಮುಡಾ ಮಾಜಿ ಸದಸ್ಯ ಸಿ.ಜಿ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿ ಜ.27ರಿಂದ 29ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜರುಗುವ ಮೂರು ದಿನಗಳ ಪಂದ್ಯಾವಳಿ ಉದ್ಘಾಟನೆಯನ್ನು ಜ.27ರ ಶುಕ್ರವಾರ ಸಂಜೆ 4ಕ್ಕೆ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಮುಖಂಡ ಧ್ರುವರಾಜ್, ಎಂಡಿಎಫ್‍ಎ ಕಾರ್ಯದರ್ಶಿ ಮಂಜುನಾಥ್, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಮುಡಾ ಮಾಜಿ ಸದಸ್ಯ ಅನ್ವರ್ ಪಾಷಾ ಹಾಗೂ ಉದ್ಯಮಿ ಪಿ.ಉಸ್ಮಾನ್ ಭಾಗವಹಿಸುವರು ಎಂದು ತಿಳಿಸಿದರು.

ನಗರದಲ್ಲಿ ಸುಸಜ್ಜಿತ ಹಾಗೂ ಶಾಶ್ವತವಾದ ಫುಟ್‍ಬಾಲ್ ಮೈದಾನವೊಂದು ಬೇಕಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದು, ಪಂದ್ಯಾವಳಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಕಾರವಾರ ಹಾಗೂ ಚೆನೈ ಸೇರಿದಂತೆ ಒಟ್ಟು 30 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು ಪ್ರತಿದಿನ 10 ರಿಂದ 12 ಪಂದ್ಯಗಳು ಜರುಗುವವು ಎಂದರು.

ಜ.29ರಂದು ನಡೆಯುವ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಜಿ ಸಚಿವರುಗಳಾದ  ವಿ.ಶ್ರೀನಿವಾಸ ಪ್ರಸಾದ್ ಹಾಗೂ ರಾಮದಾಸ್ ಪಾಲ್ಗೊಂಡು ಬಹುಮಾನ ವಿತರಿಸುವರು. ವಿಜೇತ ತಂಡಕ್ಕೆ 30 ಸಾವಿರ ರೂಪಾಯಿಗಳ ನಗದು ಮತ್ತು ರನ್ನರ್ ಅಪ್ ಗೆ 10 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಗುವುದು, ಪ್ರತಿ ತಂಡದಲ್ಲಿ 6 ಜನ ಆಟಗಾರರು ಹಾಗೂ ಇಬ್ಬರು ಹೆಚ್ಚುವರಿ ಆಟಗಾರರನ್ನು ಒಳಗೊಂಡಿದ್ದು ಈಗಾಗಲೇ ಪಂದ್ಯಾವಳಿ ಬಗ್ಗೆ ಪ್ರಚಾರವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಕ್ಲಬ್‍ ಸದಸ್ಯರಾದ ಫಬೀನ್, ರಾಜು, ಪೈರೋಜ್ ಖಾನ್ ಹಾಗೂ ಯೋಗಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: