ಲೈಫ್ & ಸ್ಟೈಲ್

ಡಯಾಬಿಟಿಸ್ ಇದ್ದರೆ ಹೆಚ್ಚಾಗುತ್ತದೆ ಬೆನ್ನುನೋವು, ಕುತ್ತಿಗೆ ನೋವು?

ಬೆನ್ನು ನೋವು ಮತ್ತು ಕುತ್ತಿಗೆ ನೋವು ಎಂಬ ದೂರು ನೀಡುವ ವ್ಯಕ್ತಿಗಳಲ್ಲಿ ಹೆಚ್ಚಿನವರು ಮಧುಮೇಹಿಗಳೇ ಆಗಿರುತ್ತಾರೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಆದರೆ ಈ ನೋವಿಗೆ ಮಧುಮೇಹ ನೇರವಾದ ಕಾರಣವೇ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಬೆನ್ನು ನೋವು ಎದುರಾಗುವ ಸಾಧ್ಯತೆ ಮಧುಮೇಹಿಗಳಿಗೆ ಇತರರಿಗಿಂತ 35% ಹೆಚ್ಚು ಎಂದು ಈ ಸಂಶೋಧನೆ ತಿಳಿಸಿದೆ.

ಇದಕ್ಕಾಗಿ ಒಟ್ಟು 1.31 ಲಕ್ಷ ವ್ಯಕ್ತಿಗಳ ಆರೋಗ್ಯದ ಮಾಹಿತಿಯನ್ನು ಐದು ಅಧ್ಯಾಯಗಳ ಮೂಲಕ ಕಲೆಹಾಕಲಾಗಿತ್ತು ಹಾಗೂ ಸುಮಾರು 6,560 ವ್ಯಕ್ತಿಗಳ ಆರೋಗ್ಯದ ಮಾಹಿತಿಯನ್ನು ಎರಡು ಅಧ್ಯಾಯಗಳಲ್ಲಿ ನಡೆಸಿದ ಬಳಿಕ ಮಧುಮೇಹಿಗಳಿಗೆ ಕುತ್ತಿಗೆ ನೋವು ಆವರಿಸುವ ಸಾಧ್ಯತೆ ಇತರರಿಗಿಂತ 24% ಹೆಚ್ಚು ಎಂದು ಖಚಿತವಾಗಿದೆ.

ಆದರೆ ವ್ಯಕ್ತಿಯ ಆರೋಗ್ಯವನ್ನು ಸಮಯದ ಅಳತೆಯಲ್ಲಿ ಕಲೆಹಾಕಿ ನೋಡಿದಾಗ ಆ ವ್ಯಕ್ತಿಯ ಮಧುಮೇಹಕ್ಕೂ ಬೆನ್ನು, ಕುತ್ತಿಗೆ ಅಥವಾ ಬೆನ್ನುಮೂಳೆಯ ನೋವಿಗೂ ನೇರವಾದ ಸಂಬಂಧವಿರುವುದು ಎಂದೆನಿಸುವುದಿಲ್ಲವಂತೆ, ಆದರೆ ಮಧುಮೇಹಿಗಳ ಆರೋಗ್ಯದ ಪರಿಣಾಮವಾಗಿ ಈ ತೊಂದರೆಗಳ ಸಹಿತ ಇತರ ತೊಂದರೆಗಳು ಎದುರಾಗುವ ಸಾಧ್ಯತೆಯೂ ಹೆಚ್ಚಬಹುದು ಎಂದೂ ವರದಿ ತಿಳಿಸುತ್ತದೆ. (ಎನ್.ಬಿ)

Leave a Reply

comments

Related Articles

error: