ಪ್ರಮುಖ ಸುದ್ದಿ

ಮಂಡ್ಯ ಜಿಲ್ಲಾದ್ಯಂತ ವಿದ್ಯುತ್  ಮತ್ತು ಕೇಬಲ್ ಕಟ್ : ಜನಸಾಗರಕ್ಕೆ ಬೆಚ್ಚಿ ಬಿದ್ದ ಮೈತ್ರಿ ನಾಯಕರು

ರಾಜ್ಯ(ಮಂಡ್ಯ)ಮಾ.20:- ನಟಿ ಸುಮಲತಾ ಅವರು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿಗಳ ಕಛೇರಿ ಸುತ್ತ ಮುತ್ತಲಿನ ಸ್ಥಳದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ಬೆಂಬಲ ಸೂಚಿಸಿದರು. ಹಾಗಾಗಿ ಮಂಡ್ಯ ಜಿಲ್ಲಾದ್ಯಂತ ಇಂದು ವಿದ್ಯುತ್ ಮತ್ತು ಕೇಬಲ್ ಕಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮಹಾವೀರ ಸರ್ಕಲ್ ಬಳಿಯ ಸಿಲ್ವರ್ ಜ್ಯುಬಿಲಿ ಪಾರ್ಕ್ ನ ವೇದಿಕೆಯಲ್ಲಿ ಅಭಿಮಾನಿಗಳು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರ್ಮ ಯುದ್ಧದಲ್ಲಿ ಗೆಲ್ಲಿ, ಅಧರ್ಮದಲ್ಲಿ ಅಲ್ಲ ಅಂತ ಅಭಿಮಾನಿಗಳು ಹರಿಹಾಯ್ದರು.

ನಟಿ ಸುಮಲತಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜನಸಾಗರದ ಜೊತೆ ಮೆರವಣಿಗೆ ಮೂಲಕ ವೇದಿಕೆಗೆ ನಟ ದರ್ಶನ್ ಮತ್ತು ಯಶ್ ಅವರ ಜೊತೆಗೆ ಆಗಮಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: