ಮನರಂಜನೆ

‘ನೀವು ಸಲಿಂಗ ಕಾಮಿಯೇ’ ಎಂಬ ಪ್ರಶ್ನೆಗೆ ಕರಣ್ ಜೋಹರ್ ಹೇಳಿದ್ದೇನು?

ಮುಂಬೈ,ಮಾ.20-ನಿರ್ಮಾಪಕ ಅರ್ಬಾಜ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ವೆಬ್ ಶೋ ಪಿಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕರಣ್ ಬಗ್ಗೆ ನೆಟ್ಟಿಗರು ಯಾವ ರೀತಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಅರ್ಬಾಜ್ ತಿಳಿಸಿದರು. ಈ ಕಾಮೆಂಟ್ಸ್ ನಲ್ಲಿ ‘ನೀವು ಸಲಿಂಗ ಕಾಮಿಯೇ?’ ಎಂಬ ಕಾಮೆಂಟ್ ಸಹ ಇತ್ತು. ಈ ಕಾಮೆಂಟ್ ಬಗ್ಗೆ ಕರಣ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

`ಇಲ್ಲ, ನಾನು ಹುಡುಗನಾಗಿಯೇ ಜನಿಸಿದೆ. ಅದಕ್ಕಾಗಿ ಹೆಮ್ಮೆ ಇದೆ. ಆದರೆ ನನ್ನಲ್ಲಿ ಒಬ್ಬ ಮಹಿಳೆ ಸಹ ಇದ್ದಾಳೆ. ಅದೇ ನನ್ನನ್ನು ಪುರುಷನಾಗಿ ಇನ್ನಷ್ಟು ಬಲಶಾಲಿಯನ್ನಾಗಿ ಮಾಡುತ್ತಿದೆ’ ಎಂದಿದ್ದಾರೆ.

ಇದುವರೆಗೆ ನನ್ನ ಮೇಲೆ ಬರುತ್ತಿರುವ ಈ ರೀತಿಯ ಕಾಮೆಂಟ್ಸ್ ನೋಡಿ ತುಂಬಾ ನೋವಾಗುತ್ತಿತ್ತು. ಆದರೆ ಈಗ ಅವೆಲ್ಲಾ ನನಗೆ ತುಂಬಾ ತಮಾಷೆಯಾಗಿ ಕಾಣಿಸುತ್ತವೆ. ನನ್ನ ಬಗ್ಗೆ ಮಾತನಾಡುವ ಹಕ್ಕು ನೆಟ್ಟಿಗರಿಗೆ ಇರುತ್ತದೆ. ಆದರೆ ನನ್ನಲ್ಲಿ ಏನೋ ಲೋಪ ಇದೆ. ಖಾಯಿಲೆ ಇದೆ ಎಂಬಂತೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ಆ ರೀತಿ ಮಾತನಾಡುವವರ ಬಾಯಿ ಮುಚ್ಚಿಸುತ್ತೇನೆ ಎಂದಿದ್ದಾರೆ.

ನನಗೆ ನನ್ನ ಬಗ್ಗೆಗಿಂತ ನನ್ನ ಮಕ್ಕಳ ಬಗ್ಗೆ ಯಾರಾದರೂ ಕಾಮೆಂಟ್ ಮಾಡಿದರೆ ಕೋಪ ಬರುತ್ತದೆ. ಮಕ್ಕಳ ವಿಚಾರದಲ್ಲಿ ನಾನು ತುಂಬಾ ಸೂಕ್ಷ್ಮವಾಗಿ ಇರುತ್ತೇನೆ. ಯಾರಾದರೂ ಅವರ ಬಗ್ಗೆ ಕಾಮೆಂಟ್ ಮಾಡಿದರೆ ಸಹಿಸಲ್ಲ ಎಂದು ಹೇಳಿದ್ದಾರೆ.

ಕರಣ್ ಜೋಹರ್ ನಿರ್ಮಾಣದ ಎರಡು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಕೇಸರಿ ಮತ್ತು ಕಳಂಕ್ ಸಿನಿಮಾಗಳು ಕ್ರಮವಾಗಿ ಮಾರ್ಚ್ 21 ಮತ್ತು ಏಪ್ರಿಲ್ 19ರಂದು ರಿಲೀಸ್ ಆಗುತ್ತಿವೆ. ಕೇಸರಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಪರಿಣೀತಿ ಚೋಪ್ರಾ ಇದ್ದರೆ, ಕಳಂಕ್‌ ತಾರಾಗಣದಲ್ಲಿ ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆಲಿಯಾ ಭ್ಟ್, ವರುಣ್ ಧವನ್, ಅದಿತ್ಯ ರಾಯ್ ಕಪೂರ್ ಮತ್ತು ಸಂಜಯ್ ದತ್ ಅಭಿನಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: