ಮೈಸೂರು

ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗಾಗಿ ಮೈಸೂರು ಮೃಗಾಲಯದಿಂದ ಬೇಸಿಗೆ ಶಿಬಿರ

ಮೈಸೂರು,ಮಾ.21:- ಮೈಸೂರು ಮೃಗಾಲಯವು 21/04/2019ರಿಂದ 30/04/2019ರವರೆಗೆ ಹಾಗೂ 5/5/2019ರಿಂದ 15/05/2019ರವರೆಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಹತ್ತುದಿನಗಳ ಅವಧಿಗೆ ನಡೆಸಲು ಉದ್ದೇಶಿಸಿದೆ.

ಪ್ರಕೃತಿ ಮತ್ತು ವನ್ಯ ಪ್ರಾಣಿ ಸಂಕುಲಗಳ ಸಂರಕ್ಷಣೆ, ಜೈವಿಕ ವೈವಿಧ್ಯತೆಗಳ ಬಗ್ಗೆ ಮಕ್ಕಳಿಗೆ ತಿಳಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಶಿಬಿರದ ಅವಧಿಯಲ್ಲಿ ಕಾರಂಜಿಕೆರೆ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವುದು, ಅಲ್ಲಿನ ಪಕ್ಷಿ ವೀಕ್ಷಣೆ, ಮರಗಿಡ ಗುರುತಿಸುವುದು, ಪ್ರಾಣಿಗಳ ವರ್ತನೆಗಳ ಅಧ್ಯಯನಗಳು ಈ ಬೇಸಿಗೆ ಶಿಬಿರ ಕಾರ್ಯಕ್ರಮದ ಹೆಚ್ಚುವರಿ ವಿಷಯಗಳಾಗಿವೆ.

ಒಂದನೇ ತಂಡದಲ್ಲಿ 7ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದ್ದು ಎಪ್ರಿಲ್ 21ರಿಮದ 30ರವರೆಗೆ ನಡೆಯಲಿದೆ. ಎರಡನೇ ತಂಡದಲ್ಲಿ 7ನೇತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದ್ದು ಮೇ.5ರಿಂದ 14ರವರೆಗೆ ನಡೆಯಲಿದೆ. ತಂಡದಲ್ಲಿ 60ವಿದ್ಯಾರ್ಥಿಗಳು  ಭಾಗವಹಿಸಬಹುದಾಗಿದ್ದು, ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯಲಿದೆ.

ಶಿಬಿರದ ಸದಸ್ಯತ್ವ ಪಡೆಯಬಯಸುವವರು ಅರ್ಜಿಗಳನ್ನು ಕಛೇರಿ ವೇಳೆಯಲ್ಲಿ 25/3/2019ರಿಂದ 5/4/2019ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 5ಗಂಟೆಯವರೆಗೆ ಪಡೆದುಕೊಂಡು ಕಛೇರಿಯಲ್ಲೇ ಭರ್ತಿ ಮಾಡಿ ಅಗತ್ಯ ದಾಖಲಾತಿಗಳಾದ ವಯಸ್ಸಿನ ದೃಢೀಕರಣ ಪತ್ರ, ಇತ್ತೀಚಿಗಿನ ಸ್ಟಾಂಪ್ ಸೈಜ್ ನ 2ಭಾವಚಿತ್ರ, ನಿಗದಿತ ಶುಲ್ಕ 500ರೂ.ಪಾವತಿಸಿ ಕಛೇರಿಗೆ ನೀಡಬಹುದು. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ನೋಂದಣಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂ.ಸಂ. 0821-2520302/2440752ಗೆ ಕರೆ ಮಾಡಬಹುದು. ಮೃಗಾಲಯದ ವೆಬ್ ಸೈಟ್ ನಲ್ಲಿಯೂ ಮಾಹಿತಿ ಲಭ್ಯವಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: