ಸುದ್ದಿ ಸಂಕ್ಷಿಪ್ತ
ದತ್ತಿ ಉಪನ್ಯಾಸ ನಾಳೆ
ಮೈಸೂರು,ಮಾ.20 : ಮೈವಿವಿಯ ವಾಣಿಜ್ಯ ಮತ್ತು ಸಹಕಾರ ವಿಭಾಗದಿಂದ ಪ್ರೊ.ಎಂ.ಮಾದಯ್ಯ ದತ್ತಿ ಉಪನ್ಯಾಸವನ್ನು ನಾಳೆ ಬೆಳಗ್ಗೆ 11.30ಕ್ಕೆ ವಿಜ್ಞಾನ ಭವನದ ಐಓಇ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಬೆಂಗಳೂರಿನ ಅತಿಥಿ ಉಪನ್ಯಾಸಕ ಪ್ರೊ.ಎಂ.ಎಸ್.ಶ್ರಿರಾಮ್ ಅವರು ಉಪನ್ಯಾಸ ನೀಡುವರು. ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮುಖ್ಯ ಅತಿಥಿಯಾಗಿದ್ದಾರೆ. ವಿಭಾಗದ ಮುಖ್ಯಸ್ಥೆ ಡಾ.ಎಂ.ಇಂದಿರಾ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)