ಪ್ರಮುಖ ಸುದ್ದಿ

ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ಅಂಚೆ ಲಕೋಟೆ ಬಿಡುಗಡೆ

ರಾಜ್ಯ(ಮಡಿಕೇರಿ) ಮಾ.21 :- ರಾಷ್ಟ್ರಪಿತ ಗಾಂಧಿಜಿಯವರ 150ನೇ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ, ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮಕ್ಕೆ ಮಹಾತ್ಮ ಗಾಂಧಿಯವರು ಭೇಟಿ ನೀಡಿ 85 ವರ್ಷಗಳಾಗಿದೆ.

ಈ ಸವಿ ನೆನಪಿಗಾಗಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ಸಮಿತಿಯವರ ಸಮ್ಮುಖದಲ್ಲಿ ಮಾರ್ಚ್, 19 ರಂದು ವಿಶೇಷ ಅಂಚೆ ಲಕೋಟೆಯನ್ನು ಬೆಂಗಳೂರು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅವರು ಆಶ್ರಮದ ಅಧ್ಯಕ್ಷ ಸ್ವಾಮೀಜಿಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ವಿಶೇಷ ಅಂಚೆ ಲಕೋಟೆಯನ್ನು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ಸಮಿತಿ ಪ್ರಾಯೋಜಿಸಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: