ಮೈಸೂರು

ಜೆ.ಎಸ್.ಎಸ್.ವಿಜ್ಞಾನ-ತಂತ್ರಜ್ಞಾನ ವಿಶ್ವವಿದ್ಯಾನಿಲಯ ವ್ಯಾಲೆಸ್ ಮರಿನೆರಿಸ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ನಡುವೆ ಒಡಂಬಡಿಕೆ

ಮೈಸೂರು,ಮಾ.21:- ಮೈಸೂರಿನ ಜೆ.ಎಸ್.ಎಸ್.ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಹಾಗೂ ಚೆನ್ನೈನ ಬಾಹ್ಯಾಕಾಶ ತಂತ್ರಜ್ಞಾನ  ಆಧಾರಿತ ಕಂಪನಿಯಾದ ವ್ಯಾಲೆಸ್ ಮರಿನೆರಿಸ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ನಡುವೆ, ಇತ್ತೀಚೆಗೆ ಒಡಂಬಡಿಕೆ ಸಹಿ ಹಾಕಲಾಯಿತು.

ವ್ಯಾಲೆಸ್ ಮರಿನೆರಿಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಯಕುಮಾರ್ ವೆಂಕಟೇಶನ್ ಹಾಗೂ ಜೆ.ಎಸ್.ಎಸ್.ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಕೆ.ಲೋಕೇಶ್‍ರವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.  ಈ ಎರಡೂ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಸ್ಪರ ಕಾರ್ಯಪ್ರವೃತ್ತರಾಗಲು ಒಮ್ಮತವನ್ನು ಸೂಚಿಸಿದವು. ಸಮಾಜಕ್ಕೆ ಅತ್ಯಮೂಲ್ಯವಾದ  ಅತಿಸೂಕ್ಷ್ಮ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಉಡಾಯಿಸಲು, ಈ ಒಡಂಬಡಿಕೆ ಯೋಜಿಸಲಾಗಿದೆ. ಈ ಉಪಗ್ರಹದಿಂದ ಹವಾಮಾನ ಪರಿವೀಕ್ಷಣೆ, ವಿಕಿರಣ ಪರಿವೀಕ್ಷಣೆ, ನೈಸರ್ಗಿಕ ವಿಕೋಪ ನಿರ್ವಹಣೆ, ಹಸಿರು ಇಂಧನ ಯೋಜನೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳಿಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಣೆ ಮತ್ತು ಸಂಶೋಧನೆ ನಡೆಸುವುದೇ ಇವರ ಉದ್ದೇಶವಾಗಿದೆ.

ಜೆ.ಎಸ್.ಎಸ್.ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಬಿ.ಜಿ.ಸಂಗಮೇಶ್ವರ ಅವರು ಮಾತನಾಡಿ ಕರ್ನಾಟಕ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಇಂತಹ ಒಡಂಬಡಿಕೆ ಪರಿಹಾರವಾಗುವ ಮೂಲಕ ಮಾನವ ಬಂಡವಾಳ ಅಭಿವೃದ್ಧಿಗೂ ಕಾರಣವಾಗಿದೆ. ಹಾಗೂ ಬೋಧನಾ ವಿಭಾಗದ ಸದಸ್ಯರುಗಳು , ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಿಂದ ಹೆಚ್ಚು ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.

ಕುಲಪತಿಗಳಾದ ಡಾ.ಬಿ.ಜಿ.ಸಂಗಮೇಶ್ವರ, ಕುಲಸಚಿವರಾದ ಡಾ. ಕೆ.ಲೋಕೇಶ್, ಡಾ. ಟಿ.ಎನ್.ನಾಗಭೂಷಣ್(ಡೀನ್ ಅಕಾಡೆಮಿಕ್ಸ್), ಇಸ್ರೋನ ಮಾಜಿ ನಿರ್ದೇಶಕ   ಡಾ. ಎಸ್. ರಂಗರಾಜನ್, ಡಾ. ಮಲ್ಲಿಕಾರ್ಜುನ್ ಆರಾಧ್ಯ (ಡೀನ್ ಇಂಜಿನಿಯರ್ ), ಡಾ. ಎನ್. ಹರಪ್ರಸಾದ್ (ಉಪ ಕುಲಸಚಿವರು), ಡಾ.ಪಿ.ನಾಗೇಶ್ (ಡೀನ್ ಮ್ಯಾನೇಜ್‍ಮೆಂಟ್) ಮತ್ತು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು ಹಾಗೂ ಸದಸ್ಯರು ಉಪಸ್ಥಿತರಿದ್ದರು.   (ಜಿ.ಕೆ,ಎಸ್.ಎಚ್)

 

 

 

 

 

Leave a Reply

comments

Related Articles

error: