ಮೈಸೂರು

ಮಹಿಳಾ ವಿಮುಕ್ತಿಯೇ ನಿಜವಾದ ಸ್ವಾತಂತ್ರ್ಯ: ಪೂರ್ಣಿಮಾ ಕೋಟಾ

ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು. ಜೊತೆಗೆ ಮಹಿಳೆಯರಿಗಾಗಿ ಝೂನ್ಸಿ ರೆಜಿಮೆಂಟ್‌ ಅನ್ನು ಹುಟ್ಟು ಹಾಕಿದರು. ಮಹಿಳೆಯರೂ ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಿದರು. ನಿಜವಾದ ಸ್ವಾತಂತ್ರ್ಯವೆಂದರೆ ಅದು ಮಹಿಳೆಯರಿಗೆ ದೊರಕುವ ಸ್ವಾತಂತ್ರ್ಯವೇ ಆಗಿರುತ್ತದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಮೈಸೂರು ಜಿಲ್ಲಾ ಸಮಿತಿ ಇಂಜಿನಿಯರ್ ಪೂರ್ಣಿಮಾ ಕೋಟಾ ಅವರು  ಹೇಳಿದರು.

ಇಂದು (ಜ.25) ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೇತಜಿಯವರ 120ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತೀಯ ಸೇನೆಗೆ ಅಚ್ಚುಕಟ್ಟುತನದ ಮೆರುಗನ್ನು ಕೊಟ್ಟವರು ನೇತಾಜಿ. 1500 ಜನ ಮಹಿಳೆಯರನ್ನೊಳಗೊಂಡ ಮಹಿಳಾ ತುಕಡಿಯನ್ನು ಲಕ್ಷ್ಮಿ ಸ್ವಾಮಿನಾಥನ್‌ರವರು ಪ್ರಾರಂಭಿಸಿ ಅದರ ನಾಯಕಿಯಾಗಿ ಮುಂದಾಳತ್ವವನ್ನು ವಹಿಸಿಕೊಂಡರು. ಭಾರತೀಯ ರಾಷ್ಟ್ರೀಯ ಸೇನೆಯು 60 ಸಾವಿರ ಸೈನಿಕರನ್ನು ಒಳಗೊಂಡ ಬೃಹತ್ ಸೇನೆಯಾಗಿರುತ್ತದೆ. ಮಹಿಳೆಯರು ಸೇನೆಯಲ್ಲೇ ಹೋರಾಡುವ ಶಕ್ತಿ ಇರುವಾಗ ಮಹಿಳೆಯರ ಮೇಲೆ ನಡೆಯುವ ಶೋಷಣೆಯ ವಿರುದ್ಧವೂ ಧ್ವನಿ ಎತ್ತಬೇಕು ಎಂದರು.

ಬದುಕಿನಲ್ಲಿ ನಿರ್ದಿಷ್ಟ ಗುರಿ ಹೊಂದಿದವರು ನೇತಾಜಿ. ಇವರು ವಿವೇಕಾನಂದರ ಅನುಯಾಯಿಗಳಾಗಿದ್ದು, ಅವರ ತತ್ವಾದರ್ಶಗಳಿಗೆ ಮಾರುಹೋಗಿದ್ದರು. ತಮಗೆ ದೊರೆತ ಉನ್ನತ ಹುದ್ದೆಯನ್ನು ತ್ಯಜಿಸಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು. ಸಂಧಾನಾತೀತ ಪಂಥ ಹಾಗೂ ಸಂಧಾನದ ಪಂಥವೆಂಬ ಎರಡು ಪಂಥಗಳನ್ನು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಬಹುದು ಎಂದು ಎಐಎಂಎಸ್‌ಎಸ್ ಮೈಸೂರು ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಜಿ.ಎಸ್.ಸೀಮಾ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಂ.ಶಾರದ, ಪ್ರಾಂಶುಪಾಲರು, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮೈಸೂರು ಇವರು ವಹಿಸಿದ್ದರು. ಶ್ರೀಮತಿ ತ್ರಿವೇಣಿ, ಉಪನ್ಯಾಸಕರು, ಇತಿಹಾಸ ವಿಭಾಗ, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮೈಸೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ಗಾಯಿತ್ರಿ, ಪ್ರಥಮ ಬಿ.ಎ. ವಿದ್ಯಾರ್ಥಿನಿ ಪ್ರಾರ್ಥಿಸಿದರೆ, ಕು. ಜಯಶ್ರೀ ಡಿ.ಕೆ. ತೃತೀಯ ಬಿ.ಎ. ವಿದ್ಯಾರ್ಥಿನಿ ನಿರೂಪಿಸಿದರು, ಕು. ರಂಜಿತಾ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಎಲ್ಲರನ್ನು ಸ್ವಾಗತಿಸಿದರು ಹಾಗೂ ಕು. ವೀಣಾ ಪ್ರಥಮ ಬಿ.ಎ. ವಿದ್ಯಾರ್ಥಿನಿ ಎಲ್ಲರನ್ನು ವಂದಿಸಿದರು.

Leave a Reply

comments

Related Articles

error: