ದೇಶಪ್ರಮುಖ ಸುದ್ದಿ

ಜ.31ರ ನಂತರ ಅನಲಾಗ್ ಸಾಧನ ವಶ: ಕೇಬಲ್ ನಿರ್ವಾಹಕರಿಗೆ ಕೇಂದ್ರ ಎಚ್ಚರಿಕೆ

ನವದೆಹಲಿ: ಕೇಂದ್ರ ಸರ್ಕಾರವು 3ನೇ ಹಂತದ ನಗರಗಳಲ್ಲಿನ ಕೇಬಲ್ ಆಪರೇಟರ್’ಗಳಿಗೆ ಅನಲಾಗ್ ಸೇವೆ ತಡೆಹಿಡಿಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಈ ಮೊದಲು ನಿರ್ದೇಶನ ನೀಡಿದ್ದಂತೆ ಕೇಬಲ್ ಪ್ರಸಾರವನ್ನು ಡಿಜಿಟಲೀಕರಣಗೊಳಿಸುವ 3ನೇ ಹಂತದ ಯೋಜನೆ 2015ನೇ ವರ್ಷದ ಅಂತ್ಯದಲ್ಲೇ ಪೂರ್ಣಗೊಳ್ಳಬೇಕಿತ್ತು.

ಆದ್ದರಿಂದ ಜ.31, 2017ರ ಗಡುವನ್ನು ನಿಗದಿಪಡಿಸಿದ್ದು ತದನಂತರ ಅವಧಿ ವಿಸ್ತರಿಸುವುದಿಲ್ಲ. ಬದಲಾಗಿ ಅನಲಾಗ್ ಕೇಬಲ್ ಟೀವಿ ಪ್ರಸಾರ ಮಾಡುವ ಸಾಧನ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: