ಮೈಸೂರು

ಚುನಾವಣೆಯ ದಿನ ಪ್ರೇಕ್ಷಣೀಯ ಸ್ಥಳಗಳನ್ನು ಬಂದ್ ಮಾಡಿಸುವಂತೆ ಒತ್ತಾಯ

ಮೈಸೂರು,ಮಾ.21:- ಚುನಾವಣೆಯ ದಿನಗಳಲ್ಲಿ ಸರ್ಕಾರ ಎಲ್ಲಾ ಮನರಂಜನೆಯ ತಾಣಗಳು, ಪ್ರೇಕ್ಷಣೀಯ ಸ್ಥಳಗಳು ಮತ್ತು ಹೋಂ ಸ್ಟೇಗಳನ್ನು ಸುಗ್ರೀವಾಜ್ಞೆ ಹೊರಡಿಸಿ ಕಡ್ಡಾಯವಾಗಿ ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಮತದಾನಕ್ಕೆ ನೀಡುವ ರಜೆ ಮೋಜು- ಮಸ್ತಿಗಾಗಿ ಬಳಕೆಯಾಗಲಿದೆ. ಆಯಾ ಜಿಲ್ಲಾಡಳಿತ ಈ ಕುರಿತು

ಎಚ್ಚರಿಸಬೇಕು, ಖಚಿತವಾದ ಮತ್ತು ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಮತ ನೋಂದಣಿ ಮಾಡಿಕೊಳ್ಳಿ ಎನ್ನುವುದು ನಂತರ ಮತದಾನದ ಪ್ರಮಾಣ ಕಡಿಮೆಯಾಗಿದೆ ಎಂದು ಚಿಂತಿಸುವುದಕ್ಕಿಂತ  ಆ ದಿನ ಮತದಾನದ ಸಮಯದಲ್ಲಿ ಟಿ.ವಿ, ಚಿತ್ರ ಮಂದಿರ ಮುಂತಾದ ಮನರಂಜನಾ ಸಾಧನಗಳನ್ನು ಸಹ ಬಂದ್ ಮಾಡಬೇಕು .ಹಾಗೆಯೇ ನಿರಂತರವಾಗಿ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸದವರಿಗೆ, ಸಾರ್ವಜನಿಕ ಸೌಲಭ್ಯಗಳನ್ನು( ಅಡುಗೆ ಅನಿಲ, ಚಾಲನಾ ಪರವಾನಗಿ, ದೂರವಾಣಿ ಸೌಲಭ್ಯ, ವಿದ್ಯುತ್ ಸೌಲಭ್ಯ ,ವಿದೇಶಿ ಪ್ರಯಾಣ, ಸಾಲ ಸೌಲಭ್ಯ ಇತ್ಯಾದಿ) ಹಂತ ಹಂತವಾಗಿ ಹಿಂಪಡೆಯಬೇಕು, ದೇಶದ ಹಿತ ಚಿಂತನೆ ಮಾಡದವರಿಗೆ ಪುಗಸಟ್ಟೆ ಸೌಲಭ್ಯಗಳನ್ನು ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: