ಮೈಸೂರು

ಹಾಲಿನ ಪ್ಯಾಕೇಟ್ ಮೂಲಕವೂ ಮತದಾನದ ಕುರಿತು ಜಾಗೃತಿ

ಮೈಸೂರು,ಮಾ.21:- ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ನಿಮ್ಮ ಮತ, ನಿಮ್ಮ ಹಕ್ಕು ತಪ್ಪದೇ ಮತದಾನ ಮಾಡಿ ಎಂದು ಸ್ವೀಪ್ ವತಿಯಿಂದ  ಹಾಲಿನ ಪ್ಯಾಕೇಟ್ ಗಳ ಮೇಲೆ ಮುದ್ರಿಸಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ಕೆಎಂಎಫ್ ಹಾಲಿನ ಪ್ಯಾಕೇಟ್ ಮೇಲೆ ನಿಮ್ಮ ಮತ ನಿಮ್ಮ ಹಕ್ಕು ತಪ್ಪದೇ ಮತ ಚಲಾಯಿಸಿ ಎಂದು ಮುದ್ರಣ ಮಾಡಲಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಆ ದಿನಾಂಕವನ್ನು ಕೂಡ ಹಾಲಿನ ಪ್ಯಾಕೇಟ್ ಮೇಲೆ ಮುದ್ರಣ ಮಾಡಲಾಗಿದೆ. ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಕೊಳ್ಳಿ ಎಂದು ಸಹ ಅದರಲ್ಲಿ ಮನವಿ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: