ಪ್ರಮುಖ ಸುದ್ದಿ

ಪತ್ರಿಕೆ ಓದುತ್ತಿರುವಾಗಲೇ ಎಐಎಡಿಎಂಕೆ ಶಾಸಕ ಹೃದಯಾಘಾತದಿಂದ ಸಾವು

ದೇಶ(ಕೊಯಂಬತ್ತೂರು)ಮಾ.21:- ತಮಿಳ್ನಾಡಿನಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ ಶಾಸಕ ಕಂಗರಾಜ್ ಇಂದು ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅವರಿಗೆ 64ವರ್ಷ ವಯಸ್ಸಾಗಿತ್ತು. ಕೊಯಂಬತ್ತೂರಿನ ಸುಲೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕಂಗರಾಜ್ ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಪತ್ರಿಕೆಯನ್ನು ಓದುತ್ತಿದ್ದರು. ಇದಕ್ಕಿದ್ದಂತೆ ಹೃದಯಾಘಾತ ಸಂಭವಿಸಿದ್ದು, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಹೃದಯಾಘಾತವಾಗುತ್ತಲೇ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲು ಮುಂದಾದ ಮನೆಯವರಿಗೆ ವೈದ್ಯರು ಅವರು ಮೃತಪಟ್ಟಿದ್ದಾರೆಂಬುದನ್ನು ದೃಢಪಡಿಸಿದರು ಎನ್ನಲಾಗಿದೆ. ಸುಲ್ತಾನಪೆಟ್ ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. (ಎಸ್.ಎಚ್)

Leave a Reply

comments

Related Articles

error: