ಮೈಸೂರು

23 ಖೈದಿಗಳಿಗೆ ಬಿಡುಗಡೆ ಭಾಗ್ಯ

ಮೈಸೂರು 68 ನೇ ಗಣರಾಜ್ಯೋತ್ಸವದ ಅಂಗವಾಗಿ ಮೈಸೂರಿನಲ್ಲಿ  ಈ ಬಾರಿ 26 ಖೈದಿಗಳ ಪೈಕಿ 23 ಖೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ.
ಹಿಂದಿನ ವರ್ಷದಂತೆ  ಈ ಬಾರಿಯೂ ರಾಜ್ಯದ ವಿವಿಧ ಜೈಲಿನಲ್ಲಿರುವ ಖೈದಿಗಳಿಗೆ ಸನ್ನಡತೆ ಆಧಾರದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಪಟ್ಟಿ ತಯಾರಿಸಿ ನಿನ್ನೆ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 144 ಖೈದಿಗಳ  ಹೆಸರಿತ್ತು.

ಅಂತೆಯೇ ಮೈಸೂರಿನ ಕಾರಾಗೃಹದಿಂದ 26 ಖೈದಿಗಳ ಪೈಕಿ 23 ಖೈದಿಗಳು  ಸನ್ನಡತೆ ಆಧಾರದಲ್ಲಿ ಗಣರಾಜ್ಯೋತ್ಸವದಂದು ಬಿಡುಗಡೆಯಾದರು. ತಾಂತ್ರಿಕ ಕಾರಣಗಳಿಂದಾಗಿ ಮೂವರಿಗೆ  ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.

ಮೈಸೂರಿನ  ಹರ್ಷಬಾರ್ ಮರ್ಡರ್ ಕೇಸ್ ನಲ್ಲಿ ಜೈಲು ಸೇರಿದ್ದ ಬೋಗಾದಿಯ ಬಸವರಾಜು ಸಹ ಬಿಡುಗಡೆಯಾಗುತ್ತಿದ್ದು ಜೈಲಿನಲ್ಲೆ ಇವರು ಉನ್ನತ ಶಿಕ್ಷಣ ಪಡೆದಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಮಹಿಳೆ ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿಲ್ಲ.

ಬಿಡುಗಡೆಯಾದ ಖೈದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಬಿಡುಗಡೆ ಪ್ರಮಾಣಪತ್ರ ವಿತರಿಸಿದರು.  ಈ ಸಂದರ್ಭ ಜಿಲ್ಲಾಧಿಕಾರಿ ಡಿ.ರಂದೀಪ್, ಮೇಯರ್ ಎಂ.ಜೆ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: