ಮೈಸೂರು

ಮಗುವನ್ನು ಬೆಂಕಿಗೆಸೆದ ಪ್ರಕರಣ : ಹಾಡಿಗೆ ಸೇರಿಸಲು ಒಪ್ಪಿಗೆ

ಜನವರಿ 19ರಂದು ಕುಡಿದ ಅಮಲಿನಲ್ಲಿ ತಾಯಿಯೋರ್ವಳು  ಮಗುವನ್ನು  ಬೆಂಕಿಗೆಸೆದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿತ್ತು. ಆಕೆಯನ್ನು ಹಾಡಿಗೆ ಸೇರಿಸಲು ಹಾಡಿ ನಿವಾಸಿಗಳು ವಿರೋದಿಸಿದ್ದು, ಇದೀಗ ಒಪ್ಪಿಕೊಂಡಿದ್ದಾರೆ.
ಚಿಕ್ಕೆರೆ ಹಾಡಿಯ ಸುಧಾ ತನ್ನ  ಮಗುವನ್ನು ಬೆಂಕಿಗೆ ಎಸೆದ ಪರಿಣಾಮ ಹಾಡಿ ಮಂದಿ ಆಕ್ರೋಶಿತರಾಗಿ ಆಕೆಯನ್ನು ಹಾಡಿಗೆ ಸೇರಿಸಲು ವಿರೋಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿ.ಡಿ.ಪಿ.ಒ ಹಾಗೂ ಟಿ ಎಸ್.ಡಬ್ಲೂ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಕೊನೆಗೂ ಅಧಿಕಾರಿಗಳು ಹಾಡಿಮಂದಿ ಮನ ಒಲಿಸಿದ್ದಾರೆ.
ಸುಧಾ ಮುಂದೆ ಈ ರೀತಿ ತಪ್ಪು ಮಾಡದಂತೆ ಕ್ಷಮೆಯಾಚಿಸಿದ್ದು, ಹಾಡಿಗೆ ಸೇರಿಸಿಕೊಳ್ಳಲು ಒಪ್ಪಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: