ದೇಶಪ್ರಮುಖ ಸುದ್ದಿ

ಹೋಳಿ ಹಬ್ಬಕ್ಕೆ ರಿಸರ್ವ್ ಬ್ಯಾಂಕ್ ಎಚ್ಚರಿಕೆ! ಹರಿದ, ಕೊಳಕಾದ, ಬಣ್ಣ ತಾಗಿದ ನೋಟು ಸ್ವೀಕರಿಸಲ್ಲ

ಬೆಂಗಳೂರು (ಮಾ.21): ರೂ.500 ಹಾಗೂ 2 ಸಾವಿರ ರೂಪಾಯಿ ನೋಟಿನ ಮೇಲೆ ಬಣ್ಣ ತಾಗಿದರೆ ಅಥವಾ ಹರಿದಿದ್ದರೆ ಅಂಗಡಿಯವರು ಸ್ವೀಕರಿಸುವುದಿಲ್ಲ. ಏಕೆಂದರೆ ಈ ನೋಟುಗಳ ಚಲಾವಣೆ ಕಷ್ಟ ಎನ್ನುವ ಕಾರಣಕ್ಕೆ ಗ್ರಾಹಕರಿಂದ ನೋಟುಗಳನ್ನು ಸ್ವೀಕರಿಸುವುದಿಲ್ಲ. ಹೋಳಿ ಹಬ್ಬದ ಸಂದರ್ಭದಲ್ಲಿ ನೋಟುಗಳಿಗೆ ಬಣ್ಣ ತಾಗುವುದು ಸಾಮಾನ್ಯವಾಗಿರುವುದರಿಂದ ಈ ಮಾಹಿತಿಯನ್ನು ಪರಿಗಣಿಸುವುದು ಸೂಕ್ತ.

ನಿಮ್ಮ ಬಳಿ ಬಣ್ಣ ತಾಗಿದ ಅಥವಾ ಸ್ವಲ್ಪ ಹರಿದ ನೋಟುಗಳಿದ್ದರೆ ಚಿಂತಿಸುವ ಅಗತ್ಯವಿಲ್ಲ. ನೋಟುಗಳನ್ನು ಬ್ಯಾಂಕ್‍ಗೆ ನೀಡಬಹುದಾಗಿದ್ದು, ಎಲ್ಲ ಬ್ಯಾಂಕುಗಳು ಇಂಥ ನೋಟುಗಳನ್ನು ತೆಗೆದುಕೊಳ್ಳುತ್ತವೆ. ಕೆಲವೊಂದು ನೋಟುಗಳನ್ನು ಬ್ಯಾಂಕುಗಳು ಕೂಡ ಸ್ವೀಕರಿಸುವುದಿಲ್ಲ. ಹೊಸದಾದ ಅಸಲಿ ರೂ. 500, 2000 ಮುಖಬೆಲೆಯ ನೋಟುಗಳು ನಿಮ್ಮ ಬಳಿಯಿದ್ದರೂ ಬ್ಯಾಂಕ್ ಸ್ವೀಕರಿಸುವುದಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಸಂಬಂಧಿಸಿದಂತೆ 2017ರಲ್ಲಿಯೇ ನಿಯಮವೊಂದನ್ನು ಜಾರಿಗೆ ತಂದಿದೆ. ನಿಯಮದ ಪ್ರಕಾರ, ನೋಟಿನ ಮೇಲೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಕುರಿತಾದ ಸ್ಲೋಗನ್ ಇರಬಾರದು. ಪ್ರಚಾರ ದೃಷ್ಟಿಯ ಅಥವಾ ಇನ್ನಿತರ ಸ್ಲೋಗನ್ ಇದ್ದರೆ ಯಾವುದೇ ಬ್ಯಾಂಕ್ ನೋಟುಗಳನ್ನು ಸ್ವೀಕರಿಸುವುದಿಲ್ಲ. ಆರ್ಬಿಐ ಕೂಡ ಇದನ್ನು ಸ್ವೀಕರಿಸುವುದಿಲ್ಲ. ನೋಟಿನ ಮೌಲ್ಯ ಎಷ್ಟೇ ಇದ್ದರೂ ಅದು ರದ್ದಾಗುತ್ತದೆ.

2017ರ ಸಾಲಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣ ಬಳಿದ, ಹರಕು ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಸುದ್ದಿ ಹರಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಆರ್ಬಿಐ ಬಣ್ಣ ತಾಗಿದ ನೋಟುಗಳನ್ನು ಎಲ್ಲ ಬ್ಯಾಂಕುಗಳು ಸ್ವೀಕರಿಸುತ್ತದೆ. ಆದರೆ ಉದ್ದೇಶಪೂರ್ವಕವಾಗಿ ನೋಟನ್ನು ಹಾಳು ಮಾಡಬೇಡಿ ಎಂದು ಸೂಚನೆ ನೀಡಿತ್ತು. (ಎನ್.ಬಿ)

Leave a Reply

comments

Related Articles

error: