ಮೈಸೂರು

ಅನುದಾನಗಳ ದುರ್ಬಳಕೆ ಆರೋಪ :ಪ್ರತಿಭಟನೆ

ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಹೋಬಳಿಯ ರಾಂಪುರ ಗ್ರಾಮ ಪಂಚಾಯತಿ ಪಿ.ಡಿ.ಓ.ಹಾಗೂ ಅಲ್ಲಿನ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆ ನೀಡಿ ಸರ್ಕಾರದಿಂದ ಬರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಒಂದೇ ಚರಂಡಿಗೆ  ಎರಡೂ ಬಿಲ್’ಗಳನ್ನು ಮಾಡಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಡಳಿತ ವರ್ಗದ ವಿರುದ್ಧ ರಾಂಪುರ ಗ್ರಾಮ ಪಂಚಾಯತಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ಜನ ಸಂಗ್ರಾಮ ಪರಿಷತ್. ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಪ್ರತಿಭಟನೆ ನಡೆಸಿತು.

ಇದರಲ್ಲಿ ನೂರಾರು ರೈತರು ಮತ್ತು ತಾಲ್ಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್,ಬೂಕ್ಕಳ್ಳಿ ನಂಜಂಡಸ್ವಾಮಿ, ಜನ ಸಂಗ್ರಾಮ ಪರಿಷತ್’ನ ಮೈಸೂರು ವಿಭಾಗೀಯ ಕಾರ್ಯದರ್ಶಿ,ನಗರ್ಲೆ ಎಂ.ವಿಜಯ್ ಕುಮಾರ್,ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಹಳ್ಳಿ ನಾರಯಾಣ್, ಮತ್ತಿತರರು ಭಾಗವಹಿಸಿದ್ದರು. ಸ್ಥಳಕ್ಕೆ ತಾಲೂಕು ಪಂಚಾಯತಿ ವ್ಯವಸ್ಥಾಪಕ ನಂಜಂಡಸ್ವಾಮಿ ಹಾಗೂ ಚೆಸ್ಕಂ ನ ಜೆ‌.ಇ.ಸಂತೋಷ್  ಮನವಿ ಸ್ವೀಕರಿಸಿದರು.

Leave a Reply

comments

Related Articles

error: