ಪ್ರಮುಖ ಸುದ್ದಿ

ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರ ದಾಳಿ : ಮೂವರ ಬಂಧನ

ರಾಜ್ಯ(ಮಡಿಕೇರಿ),ಮಾ.21:- ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಸೋಮವಾರಪೇಟೆ  ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಅಲ್ಲಿನ  ನಿವಾಸಿ ಡಿ.ಕೆ. ಲಿಂಗರಾಜು ಎಂಬಾತನ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅದೇ ಗ್ರಾಮದ ಹೆಚ್.ಡಿ. ಲಿಂಗರಾಜು, ಡಿ.ಎಸ್. ಕೀರ್ತಿ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ಸಂದರ್ಭ 14 ಲೀಟರ್ ಕಳ್ಳಭಟ್ಟಿ, 3 ಬಾಟಲ್ ರಮ್, 24 ಲೀಟರ್ ಪುಳಿಗಂಜಿ ಸೇರಿದಂತೆ ಕಳ್ಳಭಟ್ಟಿ ತಯಾರಿಸಲು ಬಳಸಲ್ಪಡುತ್ತಿದ್ದ ಪಾತ್ರೆ, ಬಿಂದಿಗೆಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ದಿನಕರ್ ಶೆಟ್ಟಿ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್‍ರಾಜ್, ಸಿಬ್ಬಂದಿಗಳಾದ ದಯಾನಂದ್, ಪ್ರಕಾಶ್, ಜೋಸೆಫ್, ಸಜಿ, ಸುರೇಶ್, ಅರುಣ್, ವಿಶ್ವ, ಶಿವಕುಮಾರ್, ಜಗದೀಶ್, ಪ್ರವೀಣ್, ಶಂಕರ್ ಅವರುಗಳು ಭಾಗವಹಿಸಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: