ಮೈಸೂರು

ನೀತಿಸಂಹಿತೆ ಉಲ್ಲಂಘನೆ ಬಗ್ಗೆ ನಿಗಾವಹಿಸಲು ಸಿ-ವಿಜಿಲ್ ಸಿಟಿಜನ್ ಆ್ಯಪ್

ಮೈಸೂರು,ಮಾ.22:- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆಯ ಬಗ್ಗೆ ನಿಗಾ ವಹಿಸಲು ಸಿ-ವಿಜಿಲ್ ಸಿಟಿಜನ್ (c-vigil citizen) ಚುನಾವಣಾ ಆ್ಯಪ್‍ನ್ನು ಭಾರತ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಜಾರಿಗೊಳಿಸಿದೆ.

ಸಾರ್ವಜನಿಕರು ಈ ಆ್ಯಪ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಯಾಗುತ್ತಿರುವ ಪೋಟೋ ಅಥವಾ ವಿಡಿಯೋ ಚಿತ್ರಣವನ್ನು ಮಾಡಿ ಸ್ಥಳದಿಂದಲೇ ಕಳುಹಿಸಬಹುದು.

ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಇದರ ಕಂಟ್ರೋಲ್ ರೂಂ ತೆರೆಯಲಾಗಿದೆ. ನಾಗರೀಕರು ಅಪ್‍ಲೋಡ್ ಮಾಡಿದ ಮಾದರಿ ನೀತಿಸಂಹಿತೆ ಉಲ್ಲಂಘನೆಯ ಪೋಟೋ ಮತ್ತು ವಿಡಿಯೋದ ಸ್ಥಳದ ಜಿಪಿಎಸ್ ಮಾಹಿತಿಯೊಂದಿಗೆ ಸಂಬಂಧಿಸಿದ ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ಹೋಗುತ್ತದೆ.

ಜಿಪಿಎಸ್ ಮೂಲಕ ಕಂಟ್ರೋಲ್ ರೂಂಗೆ ಬಂದ ಪೋಟೋ ಮತ್ತು ವಿಡಿಯೋ ಚಿತ್ರಣಗಳಿಗೆ ಸಂಬಂಧಿಸಿ ದೂರುಗಳನ್ನು ದೂರ ನಡೆದ ಸ್ಥಳದ ಕ್ಷೇತ್ರ ಅಧಿಕಾರಿಗಳಿಗೆ (FLYING SQUAD) ASSIGN ಮಾಡಲಾಗುವುದು.  ಆ ಅಧಿಕಾರಿಗಳು 15 ನಿಮಿಷದಲ್ಲಿ ದೂರು ನಡೆದ ಸ್ಥಳಕ್ಕೆ ಧಾವಿಸಿ ದೂರಿನ ಸತ್ಯಾಸತ್ಯತೆಯ ಬಗ್ಗೆ ಖಾತ್ರಿ ಮಾಡಿಕೊಂಡು  C-VIGIL INVESTIGATOR APP ಮೂಲಕ ಸಹಾಯಕ ಚುನಾವಣಾ ಅಧಿಕಾರಿಗಳ ಲಾಗಿನ್‍ಗೆ ಕಳುಹಿಸುವರು. ಸಹಾಯಕ ಚುನಾವಣಾ ಅಧಿಕಾರಿಗಳು ತಮ್ಮ ಅಂತಿಮ ನಿರ್ಣಯ ಕೈಗೊಂಡಾಗ ದೂರು ನೀಡಿದ ಸಾರ್ವಜನಿಕರಿಗೆ ಈ ಬಗ್ಗೆ ಸಂದೇಶ ರವಾನಿಸಲಾಗುವುದು.

ಜಿಲ್ಲಾ ಚುನಾವಣಾ ಅಧಿಕಾರಿಗಳು ಜೆಲ್ಲೆಯಲ್ಲಿ ಸಿ-ವಿಜಿಲ್ ಮಾನಿಟರಿಂಗ್‍ಗೆ  ಸಂಬಂಧಿಸಿದಂತೆ ನೋಡಲ್ ಅಧಿಕಾರಿ ಸೇರಿದಂತೆ ಆರು ಸದಸ್ಯರ ತಂಡವನ್ನು ರಚಿಸಲಾಗಿದೆ. ನೀತಿಸಂಹಿತೆಯ ಉಲ್ಲಂಘನೆಯು ಪರಿಶೀಲನೆಯಲ್ಲಿ ಸತ್ಯವೆಂದು ಧೃಢವಾದರೆ 100 ನಿಮಿಷಗಳಲ್ಲಿ ಕ್ರಮಕೈಗೊಳ್ಳಲು ಸೂಚನೆಯನ್ನು ನೀಡಲಾಗಿದೆ.

ಕೇಂದ್ರ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಣೆ ಮಾಡಿದ ಸಮಯದಿಂದ ಈ ಆ್ಯಪ್ ಕಾರ್ಯ ಪ್ರವೃತವಾಗಿದ್ದು, ದಿನದ 24*7 ಗಂಟೆಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈಗಾಲೇ ಮೈಸೂರು ಜಿಲ್ಲೆಯಲ್ಲಿ 27 ದೂರುಗಳು ದಾಖಲಾಗಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: