
ಮೈಸೂರು
ಸುಲಿಗೆ ಮತ್ತು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮೈಸೂರು,ಮಾ.22:- ಮೈಸೂರು ನಗರ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ 2015 ಮತ್ತು 2016 ನೇ ಸಾಲಿನಲ್ಲಿ ದಾಖಲಾದ 02- ಸುಲಿಗೆ ಮತ್ತು 02 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರುಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದು, ಮತ್ತೊಬ್ಬ ಆರೋಪಿ 2015ನೇ ಸಾಲಿನಿಂದ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಲ್ಮಾನ್ ಬಿನ್ ಲೇಟ್ ಲಿಯಾಕತ್, (23) ರಾಜೀವ್ನಗರ, ಮೈಸೂರು ಎಂದು ಗುರುತಿಸಲಾಗಿದ್ದು, ಲಕ್ಷ್ಮೀಪುರಂ ಪೊಲೀಸರು 19/03/2019 ಮೈಸೂರು ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಪತ್ತೆ ಮಾಡಿ, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು) ಮುತ್ತುರಾಜು. ಎಂ ಮಾರ್ಗದರ್ಶನದಲ್ಲಿ ಕೃಷರಾಜ ವಿಭಾಗದ ಎ.ಸಿ.ಪಿ. ಗೋಪಾಲ ಕೃಷ್ಣ ಟಿ ನಾಯಕ್ ನೇತೃತ್ವದಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಹೆಚ್. ಹರಿಯಪ್ಪ ಎಎಸ್ಐ ಗೌರಿಶಂಕರ್, ಸಿಬ್ಬಂದಿಗಳಾದ ಕುಮಾರ್, ಸಿ.ಎಸ್.ರಾಜು, ಪುಟ್ಟಸ್ವಾಮಿ, ಸುದೀಪ್ ಕುಮಾರ್ ಮತ್ತು ಸಿದ್ದಪ್ಪಾಜಿ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)