
ದೇಶಪ್ರಮುಖ ಸುದ್ದಿ
ಲಕ್ಷಗಟ್ಟಲೆ ಹಣ ವಿತ್ ಡ್ರಾ ಮಾಡುವ ಖಾತೆಗಳ ಮೇಲೆ ಹದ್ದಿನ ಕಣ್ಣು
ನವದೆಹಲಿ (ಮಾ.3): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ಹಣಕಾಸು ವ್ಯವಹಾರದ ಮೇಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಅಂತೆಯೇ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ವಿತ್ ಡ್ರಾ ಮಾಡುವ ಖಾತೆದಾರರ ಮಾಹಿತಿಯನ್ನು ಚುನಾವಣಾ ಸಿಬ್ಬಂದಿ ಪಡೆಯಲಿದ್ದಾರೆ. ಅಲ್ಲದೆ 10 ಲಕ್ಷಕ್ಕಿಂತ ಹೆಚ್ಚು ಹಣ ಪಡೆದರೆ ಇನ್ ಕಮ್ ಟ್ಯಾಕ್ಸ್ ಆಫೀಸಿಗೆ ನೇರವಾಗಿ ಮಾಹಿತಿ ರವಾನೆಯಾಗಲಿದೆ.
ಹೀಗಾಗಿ ಮುಂದಿನ ಒಂದೂವರೆ ತಿಂಗಳು ಬ್ಯಾಂಕ್ ಖಾತೆಗಳ ಮೇಲೆ ನಿಗಾ ಇಡಲಾಗ್ತಿದೆ. ಖಾತೆದಾರರು ಹೆಚ್ಚು ಹಣ ವಿತ್ ಡ್ರಾ ಮಾಡಿದ್ದರೆ ಅಂತವರಿಗೆ ನೋಟೀಸ್ ನೀಡಲಿದ್ದು, ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಿ ಎಂಬ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕಾಗುತ್ತೆ. (ಎನ್.ಬಿ)