ಪ್ರಮುಖ ಸುದ್ದಿಮೈಸೂರು

ಮೈಸೂರನ್ನೂ ಗೆಲ್ಲಿಸುವ ಭರವಸೆ ದೇವೇಗೌಡರು ನೀಡಿದ್ದಾರೆ : ಮಾಜಿ ಸಂಸದ ಸಿ.ಎಚ್. ವಿಜಯಶಂಕರ್

ಮೈಸೂರು,ಮಾ.22:-  ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ನಿವಾಸಕ್ಕೆ ಮಾಜಿ ಸಂಸದ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಭಾವ್ಯ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಭೇಟಿ ನೀಡಿದರು.

ಚಾಮರಾಜ ಮೊಹಲ್ಲಾದಲ್ಲಿರುವ ಸಚಿವ ಸಾ.ರಾ.ಮಹೇಶ್ ನಿವಾಸಕ್ಕೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕೈ,ದಳ ಮೈತ್ರಿ ಸಂಭಾವ್ಯ ಅಭ್ಯರ್ಥಿ ವಿಜಯಶಂಕರ್ ಅವರಿಂದು ಲೋಕಸಭಾ ಚುನಾವಣೆ ಹಿನ್ನಲೆ ಸಾ.ರಾ. ಮಹೇಶ್ ಬೆಂಬಲ ಯಾಚಿಸಲು ಆಗಮಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮೈತ್ರಿ ಸರ್ಕಾರ 9 ತಿಂಗಳಿನಿಂದ ಇದೆ.  ಜ್ಯಾತ್ಯಾತೀತ ಶಕ್ತಿ ಒಗ್ಗಟ್ಟಾಗಿ ದೇಶದ ಆಡಳಿತ ಹಿಡಿಯಬೇಕಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕೈ, ಜೆಡಿಎಸ್ ಒಂದಾಗಿದ್ದರೂ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ.  ಮೈತ್ರಿ ಧರ್ಮದ ಪಾಲನೆ ಲಾಭ ಎರಡೂ ಪಕ್ಷಗಳಿಗೂ ಸಿಗಬೇಕಿದೆ. ಫಲಿತಾಂಶದಲ್ಲಿ ಲಾಭ ಸಿಗದಿದ್ದರೆ ಮೈತ್ರಿ ಪ್ರಯೋಜನವಿಲ್ಲ.  ಹೀಗಾಗಿ ಸ್ಥಳೀಯ ಕಾರ್ಯಕರ್ತರೂ ಕೂಡ ಒಂದಾಗಬೇಕು. ರಾಹುಲ್ ಗಾಂಧಿಗೆ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದಲ್ಲಿ 20 ಸ್ಥಾನ ಗೆಲ್ಲಿಸುವ ಸೂಚನೆ ನೀಡಿದ್ದಾರೆ. ಮೈಸೂರನ್ನೂ ಗೆಲ್ಲಿಸುವ ಭರವಸೆ ದೇವೇಗೌಡರು ನೀಡಿದ್ದಾರೆ. ಭಿನ್ನಾಭಿಪ್ರಾಯಕ್ಕೆ ನಾವು ಅವಕಾಶ  ಕೊಡುವುದಿಲ್ಲ. ಸಣ್ಣ,ಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುತ್ತೇವೆ. ಈ ಸಂಬಂಧ ಸಾ.ರಾ.ಮಹೇಶ್ ಜೊತೆ ಮಾತನಾಡಿದ್ದೇನೆ. ಮೈಸೂರಿನಲ್ಲಿ ಜೆಡಿಎಸ್,ಕೈ ಜಂಟಿ ಸಭೆ ನಡೆಯಲಿದೆ. ಮೈಸೂರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,  ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಚಾರಕ್ಕೆ ಬರುತ್ತಾರೆ. ಸಿದ್ದರಾಮಯ್ಯ ಜೆಡಿಎಸ್ ನಾಯಕರನ್ನು  ಕರೆತರುವ ಭರವಸೆ ನೀಡಿದ್ದಾರೆ. ಮೈಸೂರಿನಲ್ಲಿ ಜಿ.ಟಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಿ.ಎಚ್.ವಿಜಯಶಂಕರ್ ಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಸಾಥ್ ನೀಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: