ಮೈಸೂರು

ಟಿಪ್ಪರ್ ಲಾರಿ ಡಿಕ್ಕಿ : ದ್ವಿಚಕ್ರವಾಹನ ಸವಾರ ಸಾವು

ದ್ವಿಚಕ್ರ ವಾಹನವೊಂದಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ  ಗುರುವಾರ ಬೆಳಿಗ್ಗೆ ಮೈಸೂರಿನಲ್ಲಿ ನಡೆದಿದೆ.

ಮೃತನನ್ನು ಮೈಸೂರಿನ ವಿದ್ಯಾರ್ಥಿ ಶ್ರೀರಂಗಪಟ್ಟಣದ ನಿವಾಸಿ ಕೀರ್ತಿಕುಮಾರ್(19)ಎಂದು ಗುರುತಿಸಲಾಗಿದೆ.

ಈತ ತನ್ನ ದ್ವಿಚಕ್ರವಾಹನದಲ್ಲಿ ಮೈಸೂರಿಗೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಲಾರಿ ಬಲವಾಗಿ ಗುದ್ದಿದ ಪರಿಣಾಮ ನೆಲಕ್ಕುರುಳಿದ ಕೀರ್ತಿಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮೈಸೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: